Category: Kannada

ಮಾತು-ಮೌನ

ನೆನಪಿಸಿಕೊ, ಆಗಹೇಗೆ ಜೊತೆ-ಜೊತೆಗೆ ಹೆಜ್ಜೆಯೊಳಗೆಜ್ಜೆಯಿಟ್ಟುಲಜ್ಜೆ ಎಂಬುದನ್ನು ಬದಿಗಿಟ್ಟುಬಾಂಬಣ್ಣ ಕರಗುವವರೆಗೂಹರಟುತ್ತಿದ್ದದ್ದು ಅದೆಷ್ಟು? ನರ ನರಗಳೂ ನಿಮಿರಿ,ಅಂಗಾಂಗಗಳೆಲ್ಲವೂ ಅದುರಿಹೊಟ್ಟೆ ಕಟ್ಟುವವರೆಗೂಬಿಡದೆ ನಕ್ಕಿಬಿಟ್ಟಿದ್ದೆಷ್ಟು? ಯಾರಿರಲಿ, ಬಿಡಲಿಏನಂದರೂ ಅನ್ನಲಿನಮಗೇನು? ಲೆಕ್ಕಿಸದೆ, ಇಬ್ಬರು-ಒಬ್ಬರಾಗಿ ಅಲೆದದ್ದೆಷ್ಟು? ಊಹಿಸಿಕೋ ಈಗಕಾಯುತಿರುವೆವು ಹೇಗೆ? ಮತ್ಸರವ ಮುಂದಿಟ್ಟುಬೆಳೆದ ಭಾವಗಳ ಬಲಿಗಿಟ್ಟುಕಾದು ಬೂದಿಯಾಗುವವರೆಗೂಎದೆಯ ಕೆಂಡದೊಳಗಿಟ್ಟು ಮಾತೆಲ್ಲಾ ಮೌನವಾಗಿಮೌನವದು ನೀರಾಗಿಕಣ್ಣೊಳಗೆ ಕರಗಿ ಜಾರಿದರೂಅರಿಯದೆ ಪಣವ ತೊಟ್ಟು ಬೆರೆಯಲಿಲ್ಲ ಮತ್ತೊಮ್ಮೆಉಳಿಸಬಹುದಿತ್ತಲ್ಲವೆ? ಒಲುಮೆಆದುದೆಲ್ಲವನು ಮರೆತುನಕ್ಕುಬಿಟ್ಟಿದ್ದರೆ ಹಠಬಿಟ್ಟು

ಕಳ್ಳತನ

ಹುಡುಗಿನಿನ್ನ ನೋಡಲು ಬಂದನನ್ನಪರದೆಯ ಮರೆಯಿಂದಕದ್ದು ನೋಡಿದೆನನ್ನೆದುರೇಕಳ್ಳತನ ಮಾಡಿದೆ ಹೊರಟು ನಿಂತಾಗಬಾಗಿಲ ಬಳಿ ಬಂದೆ“ಮತ್ತೆ ಬರುವಿರಾ?”ಎಂದೇನೋ ಕೇಳಬೇಕೆಂದುಹೇಗೇ? ಅಂದುಕೊಂಡೆನಾನದನ್ನು ಗಮನಿಸಿದೆ ಮುಂದೆ ನಾ“ರಿಕ್ಷಾ ಎಲ್ಲಿ ಸಿಗುತ್ತದೆ?”ಎಂದು ತಂಗಿಯನ್ನು ಕೇಳಿದ್ದೇ ತಡತಕ್ಷಣ ನೀನು ಉತ್ತರಿಸಿದೆಯಲ್ಲಾ“ಅಲ್ಲೇ ಮುಂದೆ” ನಾಚಿಕೆ ಇಲ್ಲದೆ.

ಕನ್ನಡ ಸಾಹಿತ್ಯ ಸಮ್ಮೇಳನ – ಎತ್ತಿಗೆ ಜ್ವರ, ಎಮ್ಮೆಗೆ ಬರೆ

ಸಾಹಿತ್ಯಾಸಕ್ತರಿಗೆಲ್ಲಾ ನಿರಾಶೆ, ಕನ್ನಡ ಸಾಹಿತ್ಯ ಚಟವಟಿಕೆಗಳು ರಾಜಕೀಯಮಯವಾಗುತ್ತಿರುವ ಬಗ್ಗೆ ವಿಷಾದ, ಸಾಹಿತ್ಯ ಸಮ್ಮೇಳನಕ್ಕೂ, ಪಂಚಾಯ್ತಿ ಚುನಾವಣೆಗೂ ಎತ್ತಿಂದೆತ್ತಣ ಸಂಬಂಧವಯ್ಯಾ ಎಂಬ ಉಲ್ಲೇಖ ಹಾಗೂ ಉದ್ಗಾರ, ವಿನಾಕಾರಣ ರಾಜಕಾರಿಣಿಗಳು ಮೂಗು ತೂರಿಸುವುದರ ಬಗ್ಗೆ ಆಕ್ಷೇಪ. ಹೀಗೆ ಒಂದಲ್ಲ ನೂರಾರು ರೀತಿಯ ಪ್ರತಿಕ್ರಿಯೆಗಳು ೭೭ನೇ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಪಂಚಾಯ್ತಿ ಚುನಾವಣೆಯ ಕಾರಣಗಳಿಂದಾಗಿ ಮುಂದೂಡುತ್ತಿರುವುದರ ಬಗ್ಗೆ ಸಾಹಿತ್ಯವಲಯಗಳಿಂದ ಕೇಳಿ ಬರುತ್ತಿವೆ. ಇದು ಸಹಜ. ನನ್ನನ್ನೂ ಸೇರಿಸಿಕೊಂಡು, ಕನ್ನಡ ಪ್ರೀತಿಸುವ ಎಲ್ಲರಿಗೂ, ಸಾಹಿತ್ಯದ ಗಂಧ-ಗಾಳಿಯೇ...

ಅನಾಥವಾಗಿ ಹೋಗುತ್ತಿರುವ ಅಪರೂಪದ ಹಾಡುಗಳು

ಹಲವಾರು ಕಾರಣಗಳಿಂದ ಇಡೀ ವಿಶ್ವದಲ್ಲೇ ವಿಶಿಷ್ಟವಾದುದು ಭಾರತೀಯ ಚಿತ್ರರಂಗ. ಚಲನ ಚಿತ್ರಗಳಲ್ಲಿ ಹಾಡುಗಳೆಂಬ ಪರಿಕಲ್ಪನೆಯನ್ನು, ಬಹಶಃ ಭಾರತದಂಥಹ ಕೆಲವೇ ಕೆಲವು ದೇಶಗಳಲ್ಲಿ ಮಾತ್ರ ಕಾಣಲು ಸಾಧ್ಯ. ನಮ್ಮಲ್ಲಿ ಹಾಡುಗಳಿಗೆ ವಿಶೇಷವಾದ ಮಹತ್ವವಿದೆ. ಸಿನಿಮಾದಲ್ಲಿ ಹಾಡು ಒಂದು ಭಾಗವಾಗಿ ಬೆರೆತುಹೋಗುತ್ತದೆ. ಕೆಲವೊಮ್ಮೆ ಹಾಡುಗಳಿಂದಲೇ ಒಂದು ಚಿತ್ರದ, ಸನ್ನಿವೇಶದ, ಪಾತ್ರದ ಪರಿಚಯವಾಗಿಹೋಗುತ್ತದೆ. ಮಾತುಗಳಲ್ಲೇ ಎಲ್ಲವನ್ನೂ ಹೇಳಲು ಹಲವಾರು ಸಾರಿ ಸಾಧ್ಯವಾಗುವಿದಿಲ್ಲ. ಅಂಥಹ ಸಂದರ್ಭಗಳಲ್ಲೆಲ್ಲಾ ಹಾಡುಗಳು ಬಹಳ ಪರಿಣಾಮಕಾರಿಯಾಗಿ ಪ್ರೇಕ್ಷಕನಿಗೆ ಸಿನಿಮಾವನ್ನು ತಲುಪಿಸುವಲ್ಲಿ ಸಹಕಾರಿಯಾಗುತ್ತವೆ....

ರಂಗರಾಯರೇ, ಅಗಣಿತ ರಾಗಮಣಿಗಳ ನಡುವೆ ನಿಮ್ಮನೇ ಮೆಚ್ಚಿದೆ ನಾನು

ಎಂ.ರಂಗರಾವ್ ಎಂದೊಡನೆ ತಕ್ಷಣ ನೆನಪಿಗೆ ಬರುವುದೇನೆಂದರೆ ಕನ್ನಡದ ಸುಶ್ರಾವ್ಯ ಚಲನ ಚಿತ್ರಗೀತೆಗಳ ಬಹು ದೊಡ್ಡ ಪಟ್ಟಿ. ಆಕಾಶವಾಣಿಯ “ಕೇಳುಗರ ಮೆಚ್ಚಿನ ಚಿತ್ರಗೀತೆ” ಕಾರ್ಯಕ್ರಮಗಳಲ್ಲಿ, ಕನ್ನಡದ ಯಾವ ಸಂಗೀತ ನಿರ್ದೇಶಕರ ಅತೀ ಹೆಚ್ಚು ಹಾಡುಗಳು ಇದುವರೆಗೂ ಪ್ರಸಾರವಾಗಿವೆ ಎಂದು ಪಟ್ಟಿ ಮಾಡಿದರೆ, ಬಹುಶಃ ಜಿ.ಕೆ.ವೆಂಕಟೇಶ್ ನಂತರ ಅವರ ಹತ್ತಿರತ್ತಿರ ನಿಲ್ಲಬಲ್ಲ ಮತ್ತೊಬ್ಬ “ಸಂಗೀತ ಕಲಾನಿಧಿ” ಶ್ರೀ ಎಂ.ರಂಗರಾವ್ ಅವರೊಬ್ಬರೇ. ವಿಜಯ ಭಾಸ್ಕರ್, ಟಿ.ಜಿ.ಲಿಂಗಪ್ಪ, ರಾಜನ್-ನಾಗೇಂದ್ರರಂಥಹ ದೈತ್ಯ ಸಂಗೀತ ಸಾರ್ವಭೌಮರ ನಡುವೆ ಇದ್ದೂ,...

ಬೊಗಳೆ ಕನ್ನಡೊದ್ಧಾರಕರಿಗೆ ಕಾರಂತರ ಮಾತಿನೇಟು

ಶಿವರಾಮ ಕಾರಂತರನ್ನೊಮ್ಮೆ ನೋಡುವ ಹಾಗೂ ಅವರ ಮಾತು ಕೇಳುವ ಸೌಭಾಗ್ಯ ನನಗೂ ಅಂದು ಸಿಕ್ಕಿತ್ತು. ಮಂಡ್ಯದಲ್ಲಿ “ವಿವೇಕಾನಂದ ಯುವ ವೇದಿಕೆ” ಯೊಂದರ ಉದ್ಘಾಟನಾ ನಿಮಿತ್ತ ಅವರು ಬಂದಿದ್ದರು. ಆ ಮಹಾನ್ ದೈತ್ಯ ಪ್ರತಿಭೆಯ ನಾಲ್ಕು ಮಾತುಗಳನ್ನು ಕೇಳಿ ಜೀವನ ಸಾರ್ಥಕ ಮಾಡಿಕೊಳ್ಳಲೋ ಎಂಬಂತೆ ಇಡೀ ನಗರದ ಜನ ಸಾಗರವೇ ಅಲ್ಲಿ ತುಂಬಿತ್ತು. ಕಾರ್ಯಕ್ರಮವೂ ಶುರುವಾಯಿತು. ನಾವೆಲ್ಲಾ ಕಾರಂತರನ್ನೇ ನೋಡುತ್ತಾ, ಮಾತು ಕೇಳುತ್ತಾ ಕುಳಿತಿದ್ದೆವು. ಅಲ್ಲಿಯ ಯವ ಮಂಡಳಿಯ ಮುಖ್ಯಸ್ಥನೊಬ್ಬ ಎದ್ದು...

ಭಕ್ತ ಕುಂಬಾರನನ್ನಾಗಿ ರಾಜಣ್ಣನನ್ನು ನೋಡುವುದತಿ ಚೆಂದ!

ಕನ್ನಡ ಚಿತ್ರಜಗತ್ತಿನ ಮರೆಯಲಾಗದ ಚಿತ್ರರತ್ನಗಳನ್ನು ಪಟ್ಟಿಮಾಡಬಹುದಾದರೆ, ಅದರಲ್ಲಿ ಅತಿ ಮುಖ್ಯವಾಗಿ “ಭಕ್ತ-ಕುಂಬಾರ”ವೂ ಒಂದು. “ಭಕ್ತ-ಕುಂಬಾರ” ಚಿತ್ರ ಹಲವಾರು ಕಾರಣಗಳಿಂದ ನನಗೆ ಇಷ್ಟವಾಗುತ್ತಾ ಹೋಗುತ್ತದೆ. ಪ್ರಮುಖವಾಗಿ ಚಿತ್ರದ ಕಥಾವಸ್ತು ಸಾಮಾನ್ಯನಿಗೂ ಅರ್ಥವಾಗುವ ರೀತಿಯಲ್ಲಿ ಸರಳಾತೀಸರಳವಾಗಿರುವುದು. ನಿರೂಪಣೆಯ ಶೈಲಿ ಮಗುವಿಗೂ ಅರ್ಥವಾಗುವಷ್ಟು ಸುಲಲಿತವಾಗಿರುವುದು. ಜೊತೆಗೆ “ಹುಣಸೂರು ಕೃಷ್ಣಮೂರ್ತಿ” ಯವರಂಥ ಪ್ರತಿಭಾವಂತರು ಈ ಅತ್ಯದ್ಭುತ ಚಿತ್ರವನ್ನು ನಿರ್ದೇಶನ ಮಾಡಿರುವುದು, ಇಂದಿಗೂ, ಮುಂದೆಯೂ, ಕನ್ನಡ ಚಿತ್ರರಂಗದ ಕೊನೆಯುಸಿರಿರುವವರೆಗೂ ಮರೆಯಾಗದಂಥಹ ಸಾಹಿತ್ಯ, ಸಂಗೀತದ ಜುಗಲ್‍ಬಂದಿಯನ್ನು ಈ ಚಿತ್ರಕ್ಕೆ...

ಹಳ್ಳಿ ಲೆಕ್ಕ

ನಾನು ನನ್ನ ತಾತ ಹಾಗೂ ತಂದೆಯವರಿಂದ ಕಲಿತ ಕೆಲವು ಹಳೆಕಾಲದ ಗಣಿತಗಳನ್ನು ಇಂದಿಲ್ಲಿ ಸಂಗ್ರಹಿಸಿ ನಮ್ಮ ಮುಂದಿನ ಪೀಳಿಗೆಯ ಜನಾಂಗಕ್ಕಾಗಿ ದಾಖಲಿಸಬೇಕೆಂದುಕೊಂಡಿದ್ದೆ. ಆ ಪ್ರಯತ್ನದ ಫಲವಾಗಿ ಕೆಲವು ಹಳ್ಳಿ ಲೆಕ್ಕಗಳನ್ನು ನಾನಿಲ್ಲಿ ಹೇಳಹೊರಟಿದ್ದೇನೆ. ಹಿಂದಿನ ದಿನಗಳಲ್ಲಿ ಇತ್ತೀಚಿನ “ಪೈಸೆ” ಮತ್ತು “ರೂಪಾಯಿ”ಗಳಿರುವಂತೆ, “ಕಾಸು”ಗಳು ಚಲಾವಣೆಯಲ್ಲಿದ್ದವು. ಒಂದು ರೀತಿಯಲ್ಲಿ ನೋಡಿದರೆ, ಹಿಂದಿನ ಎಲ್ಲಾ ಲೆಕ್ಕಗಳಲ್ಲೂ ಈ “ಕಾಸು” ಮೂಲಾಧಾರವಾಗಿರುವುದು ಕಂಡು ಬರುತ್ತದೆ. “ಕಾಸು”ಗಳಿಂದ “ರೂಪಾಯಿ”, “ರೂಪಾಯಿ”ಗಳಿಂದಲೇ ತೂಕಕ್ಕೆ ಸಂಬಂಧಪಟ್ಟ ಅಳತೆಗಳು ಹುಟ್ಟಿರುವುದನ್ನು...

ಪ್ರಶ್ನೆ

(ತುಷಾರದಲ್ಲಿ ಕವಿ ಕೆ ಎಸ್ ನ ಆಯ್ಕೆ ಕವನ) ಗೆಳತಿನಾ ಕಂಡಾಗಲೆಲ್ಲಾನಿನ್ನ ಕಣ್ಣಲ್ಲಿಒಂದುಮಲ್ಲಿಗೆಯ ಹೂವರಳಿನಗುವುದೇಕೆ? ನಿನ್ನಸವಿಮಾತುಗಳುನನ್ನೆದೆಯ ಅಂಗಳದಿಒಲವಿನ ರಂಗೋಲಿಇಡುವುದೇಕೆ? ನಿನ್ನಕೈ ಬೆರಳುಗಳನವಿರಾದ ಸ್ಪರ್ಷಕ್ಕೆನನ್ನ ಮೈಮನಗಳಲ್ಲಿಮಿಂಚಿನ ಬಳ್ಳಿಗಳುಹರಿವುದೇಕೆ? ನಿನ್ನಆ ಮುಂಗುರುಳುಮೆಲುಗಾಳಿಗಲುಗಿಒಲವ ತೊಟ್ಟಿಲೊಳಿಟ್ಟು ನನ್ನತೂಗುವುದೇಕೆ? ನಿನ್ನನಡೆ ಬಳುಕಿರಲುನನ್ನ ಮಾನಸ ವೀಣೆಮಧುರ ಮೋಹನರಾಗವನುಡಿಸುವುದು ಏಕೆ?

ಅಭಾಗಿನಿ

ವಿಶಾಲವಾದ ಕಾರೀಡಾರಿನ ಗೋಡೆ ಮಗ್ಗುಲಿನಲ್ಲಿ ಸಾಲು ಬೆಂಚುಗಳನ್ನು ಒಪ್ಪವಾಗಿ ಜೋಡಿಸಲಾಗಿದ್ದ “ಜೀವಾ” ನರ್ಸಿಂಗ್ ಹೋಂ ಅಂದೂ ಕೂಡ ಯಾರೂ ಇಲ್ಲದೆ ಭಣಗುಡುತ್ತಿತ್ತು. ಸಂಜೆಯ ಸೆರಗಿನೊಳಗೆ ಬಹು ಬೇಗನೆ ಜಾರಿಕೊಳ್ಳುತ್ತಿದ್ದ ಇತ್ತೀಚಿನ ದಿನಗಳಲ್ಲಂತೂ ಗಿರಾಕಿಗಳಿಲ್ಲದೇ ಖಾಲಿಹೊಡೆಯುತ್ತಿದ್ದುದ್ದರಿಂದ ತನ್ನ ಪ್ರಸಿದ್ಧಿ, ಪ್ರಭಾವ, ಪಾಂಡಿತ್ಯಗಳೆಲ್ಲಾ ತೀರಾ ತಗ್ಗಿಹೋಗಿವೆಯೆಂದೂ, ಬಹುಕಾಲದಿಂದಲೂ ಜನಗಳನ್ನು ವಂಚಿಸುತ್ತಿದ್ದ ಹಿಕಮತ್ತು ವಗೈರೆಗಳೆಲ್ಲಾ ಉಡುಗಿಹೋಗುತ್ತಿವೆಯೆಂದೂ ಭಾವಿಸಿಕೊಂಡು ಭವಿಷ್ಯದ ತಾಕಲಾಟದಲ್ಲಿ ತಡವರಿಸುತ್ತಾ ಕುಳಿತಿದ್ದ ಗೈನಾಕಾಲಜಿಸ್ಟ್‌ಗೆ ಅಸಾಮಿಯೊಬ್ಬನ ಜೊತೆ ಒಳಬಂದ ನರ್ಸ್‍ಗಳಿಬ್ಬರನ್ನು ಕಂಡು ಆನಂದಾಶ್ಚರ್ಯಗಳೆರಡೂ ಒಟ್ಟಿಗೆ...