Author: universini

ಆರೋಹಣ

ಪ್ರೇಮ ಪರ್ವತಾರೋಹಣ ಮಾಡೇ ಹೊರಡೋಣ ಎದೆಯ ಭಾವಗಳ ಬಾವುಟ ಅಲ್ಲೇ ಚಿತ್ರಿಸಿ ಹಾರಿಸೋಣ ನೆನಪಿಗಿರಲೊಂದು ಸಂಪುಟ ಮುದ್ರಿಸಿ ಇಟ್ಟುಕೊಳ್ಳೋಣ! ಏರುವಾದಿಯಲಿ ಕಾಡಿವೆ ಹಾಡೋ ಹಕ್ಕಿಗಳು, ಗೂಡಿವೆ ಹುಲಿ-ಚಿರತೆ ಸಿಂಹಾದಿ ವಿಷಜಂತು ಕಾದಿವೆ ಏನೇ ಎದುರಾಗಲಿ, ಗುರಿ- ಬಿಡದ ದಾರಿ ಹಿಡಿಯೋಣ! ಅಲ್ಲಿ ಹರಿವ ಜಲಪಾತದಲಿ ಹಳತ ಕೊಳೆ ತಳ ಸೇರಲಿ ಜಗವ ಮರೆತು, ಜನರ ಹೊರತು ಹೊಸತು ಬಾಳನು ಬಿತ್ತೋಣ ಎಷ್ಟು ಬೇಕಷ್ಟರಲ್ಲಿ, ಹೇಗೆ ಬದುಕುವುದೆಂದು ತಿಳಿಸೋಣ!

ಒಂಟಿತನ

ಬಾನ ಬಯಲಾಗಿದೆ ಬತ್ತಲೆ, ಬರೀ ಕತ್ತಲೆ ಮುನಿಸಿನಿಂದಿದೆ ನಭ ಭೂದೇವಿಯ ಮೇಲೆ ಚಂದಿರನ ಸುಳಿವಿಲ್ಲ ಬೆಳಕನ್ನು ತರಲಿಲ್ಲ ತಾರೆಗಳೂ ತಾವೇಕೊ ಇಂದವನ ಬಳಸಿಲ್ಲ ಗಾಳಿಗೂ ಕಚಗುಳಿಯ ಮೂಡಿಸುವ ಮನಸಿಲ್ಲ ಮೋಡಕೂ ಅದರೊಡನೆ ತಾನಾಡುವ ಒಲವಿಲ್ಲ ಹೂವಾದರೂ ಉಸಿರಾಡಿ ಗಂಧವನು ಬಿಡುತ್ತಿಲ್ಲ ಮಳೆಯಾಗಿದೆ, ಮರದಿಂದ ಜೀರುಂಢೆಯ ದನಿಯಿಲ್ಲ ವಿಧಿಯೊಡನೆ ಕಾದಾಡಿ ಬರಿಗೈಯ್ಯೇ ನಿನಗಿಂದು ದಾರಿ ನೋಡೆನು ಫಲ? ಪ್ರಿಯತಮನ ಬರುವಿಲ್ಲ

ಪ್ರಶ್ನೆಗಳು

ನಾ ನಿನ್ನ ಕೇಳಬೇಕೆಂದುಕೊಳ್ಳುತ್ತಿದ್ದೆ ಅದೇಕೆ ಹಾಗೆ, ನೋಡಿ ನಕ್ಕಿದೆ? ನಾ ಬಹುದಿನಗಳಿಂದಲೂ ಬೆಳೆಸಿ, ಪೋಷಿಸಿದ ಎಳೆಯ ಭಾವನೆಗಳು ನಿನಗೆ ಅಪಹಾಸ್ಯವೆ? ಮಳೆಯ ಬಿಲ್ಲಿನೊಳು ಎದೆಯ ತುಂಬಿರಲು ಬಗೆ ಬಗೆಯ ಕನಸುಗಳವು ನಿನಗೆ ಲಘುವಾದವೆ? ಚೆಲುವ ಕಾಂತಿಯನು ಒಲವ ಪ್ರಣತಿಯಲಿಟ್ಟು ಪೂಜೆ ಮಾಡಿದ ಪರಿಯು ನಿನಗೆ ಅವಮಾನವೆ? ನಗೆಹೂವ ರಾಶಿಯನು ಮೊಗಹೊತ್ತ ರೀತಿಯನು ಕಂಡು ಮೋಹಿಸಿದ್ದೊಂದು ನಿನಗೆ ಅಪರಾಧವೆ? ನೀ ಬಹುಶಃ ನಾನಾಗಿ ನನ್ನಂತೆ ನಿನಗಾಗಿ ಪರಿತಪಿಸಿ ಪರದಾಡಿದರೆ ನಿನಗೆ ಅನುಕೂಲವೆ?

ದಿಟ್ಟತನ

ಎದೆಯಾಳದೊಳಗೆಲ್ಲೋ ಕಟ್ಟಿ ಬಚ್ಚಿಟ್ಟಿರುವ ಕನಸು ಬುತ್ತಿಯ ಬಗ್ಗೆ ನಿನಗೆ ತಿಳಿಯಿತಾದರು ಹೇಗೆ? ಚೆಲುವಿನಾಸರೆಯೊಸೆದು ಕಣ್ಣೊಳಗಿಂದ ಅಲ್ಲಿಳಿದು ನೀನವನು ಹೆಕ್ಕಿ ಹೆಕ್ಕಿ ಕತ್ತು ಹಿಸುಕುವುದನು ಕಂಡ ಮೇಲೂ ಮೂರ್ಖನಾಗಲಾದೀತೆ? ಹೋಗೆ ಹೋಗೆ!

ಮಾತು-ಮೌನ

ನೆನಪಿಸಿಕೊ, ಆಗ ಹೇಗೆ ಜೊತೆ-ಜೊತೆಗೆ ಹೆಜ್ಜೆಯೊಳಗೆಜ್ಜೆಯಿಟ್ಟು ಲಜ್ಜೆ ಎಂಬುದನ್ನು ಬದಿಗಿಟ್ಟು ಬಾಂಬಣ್ಣ ಕರಗುವವರೆಗೂ ಹರಟುತ್ತಿದ್ದದ್ದು ಅದೆಷ್ಟು? ನರ ನರಗಳೂ ನಿಮಿರಿ, ಅಂಗಾಂಗಗಳೆಲ್ಲವೂ ಅದುರಿ ಹೊಟ್ಟೆ ಕಟ್ಟುವವರೆಗೂ ಬಿಡದೆ ನಕ್ಕಿಬಿಟ್ಟಿದ್ದೆಷ್ಟು? ಯಾರಿರಲಿ, ಬಿಡಲಿ ಏನಂದರೂ ಅನ್ನಲಿ ನಮಗೇನು? ಲೆಕ್ಕಿಸದೆ, ಇಬ್ಬರು- ಒಬ್ಬರಾಗಿ ಅಲೆದದ್ದೆಷ್ಟು? ಊಹಿಸಿಕೋ ಈಗ ಕಾಯುತಿರುವೆವು ಹೇಗೆ? ಮತ್ಸರವ ಮುಂದಿಟ್ಟು ಬೆಳೆದ ಭಾವಗಳ ಬಲಿಗಿಟ್ಟು ಕಾದು ಬೂದಿಯಾಗುವವರೆಗೂ ಎದೆಯ ಕೆಂಡದೊಳಗಿಟ್ಟು ಮಾತೆಲ್ಲಾ ಮೌನವಾಗಿ ಮೌನವದು ನೀರಾಗಿ ಕಣ್ಣೊಳಗೆ ಕರಗಿ ಜಾರಿದರೂ...

ಕನ್ನಡ ಚಿತ್ರರಂಗದ ಕುತ್ತಿಗೆ ಹಿಸುಕುತ್ತಿರವ ಡಬ್ಬಿಂಗ್ ನಿಷೇಧವೆಂಬ ಭೂತ

ತೀರಾ ಇತ್ತೀಚೆಗೆ ಅಂದರೆ “ರಂಗೀತರಂಗ” ಹಾಗು “ಬಾಹುಬಲಿ” ಎಂಬ ಕನ್ನಡದ ಹಾಗು ಒಂದು ರೀತಿಯಲ್ಲಿ ಕನ್ನಡಿಗರನ್ನೊಳಗೊಂಡಿರುವ ತೆಲುಗಿನ ಚಿತ್ರಗಳು ಚಿತ್ರಮಂದಿರಕ್ಕಾಗಿ ನಡೆಸಿದ ಪೈಪೋಟಿಯನ್ನು ಕರ್ನಾಟಕದ ಜನ ವಿಶಾಲವಾದ ತೆರೆಯ ಮೇಲೆಯೇ ವೀಕ್ಷಿಸಿದ್ದಾಯಿತು. ಒಂದು ಅತೀ ದೊಡ್ಡ ಬಜೆಟ್ಟಿನ, ಅತೀ ದೊಡ್ಡ ಜನಗಳ ಬೆಂಬಲದಿಂದ ನಿರಾಯಾಸವಾಗಿ ಕನ್ನಡನಾಡಿನಲ್ಲಿ ಬಿಡುಗಡೆಯಾದ ತೆಲುಗಿನವರ ಚಿತ್ರ. ಇನ್ನೊಂದು ಹೊಸಬರ, ಹೊಸತನದ ಹಣೆಪಟ್ಟಿಯೊತ್ತು, ಪ್ರೇಕ್ಷಕನಲ್ಲಿ ಹೊಸ ಭರವಸೆ ಹುಟ್ಟಿಸಿಲೇಬೆಕೆಂಬ ಹಂಬಲ ಹೊತ್ತು ಕನ್ನಡಿಗರ ನಾಡಿನಲ್ಲಿ ನಿಲ್ಲಲು ಹೆಣಗಾಡಿದ...

ಹುಡುಗಿ ನೋಡುವಾಗಿನನುಭವ – ಕಳ್ಳತನ

ಹುಡುಗಿ ನಿನ್ನ ನೋಡಲು ಬಂದ ನನ್ನ ಪರದೆಯ ಮರೆಯಿಂದ ಕದ್ದು ನೋಡಿದೆ ನನ್ನೆದುರೇ ಕಳ್ಳತನ ಮಾಡಿದೆ ಹೊರಟು ನಿಂತಾಗ ಬಾಗಿಲ ಬಳಿ ಬಂದೆ “ಮತ್ತೆ ಬರುವಿರಾ?” ಎಂದೇನೋ ಕೇಳಬೇಕೆಂದು ಹೇಗೇ? ಅಂದುಕೊಂಡೆ ನಾನದನ್ನು ಗಮನಿಸಿದೆ ಮುಂದೆ ನಾ “ರಿಕ್ಷಾ ಎಲ್ಲಿ ಸಿಗುತ್ತದೆ?” ಎಂದು ತಂಗಿಯನ್ನು ಕೇಳಿದ್ದೇ ತಡ ತಕ್ಷಣ ನೀನು ಉತ್ತರಿಸಿದೆಯಲ್ಲಾ “ಅಲ್ಲೇ ಮುಂದೆ” ನಾಚಿಕೆ ಇಲ್ಲದೆ.

ಕನ್ನಡ ಕಲಿ-ನಲಿ: ಅಕ್ಷರಾಭ್ಯಾಸ ಪುಟಗಳು ಹಾಗೂ ಮಾಹಿತಿ

ಹೆತ್ತವರಲ್ಲಿ ಹಾಗೂ ಹಿರಿಯರಲ್ಲಿ ಮನವಿ, ಮಾತೃಭಾಷೆಯ ಮಹತ್ವವನ್ನು ಮುದ್ದಿನ ಮಕ್ಕಳಲ್ಲಿ ಮನವರಿಕೆ ಮಾಡಿಕೊಡಬೇಕಾದ ಮುಂದಾಲೋಚನೆಯ ಮನಸ್ಸು ಹಾಗೂ ಮಹದಾಸೆಯಿದ್ದಾಗ. ಅದರ ಜೊತೆಗೆ ಮಕ್ಕಳಲ್ಲಿ ಕೂಡ ಕಲಿಯುವ ಆಸಕ್ತಿ ಅತಿಯಾಗಿದ್ದಾಗ, ಕನ್ನಡ ಕಲಿಸುವ ಪ್ರಯತ್ನ ಮಾಡುವುದರಲ್ಲಿ ಯಾವ ತಪ್ಪೂ ಇಲ್ಲ. ಅಂಥಹ ಸಂದರ್ಭಗಳಲ್ಲಿ ಕಲಿಕೆ ಸರಾಗವಾದೀತು ಮತ್ತು ಕಲಿಕೆಯ ಕೆಲಸ ಆನಂದ ತಂದೀತು. ಈ ಕಲಿಕೆಯ ಪ್ರಯಾಣದಲ್ಲಿ ಪ್ರಥಮವಾಗಿ ಮಕ್ಕಳಲ್ಲಿ ಮಾಡಿಸಬೇಕಾದ್ದು ಅಕ್ಷರಾಭ್ಯಾಸ. ಅದಕ್ಕೆಂದೇ, ಇಲ್ಲಿ ಕೆಳಗೆ ಕನ್ನಡ ವರ್ಣಮಾಲೆಯ ಎಲ್ಲಾ...

ಕನ್ನಡ ಸಾಹಿತ್ಯ ಸಮ್ಮೇಳನ – ಎತ್ತಿಗೆ ಜ್ವರ, ಎಮ್ಮೆಗೆ ಬರೆ

ಸಾಹಿತ್ಯಾಸಕ್ತರಿಗೆಲ್ಲಾ ನಿರಾಶೆ, ಕನ್ನಡ ಸಾಹಿತ್ಯ ಚಟವಟಿಕೆಗಳು ರಾಜಕೀಯಮಯವಾಗುತ್ತಿರುವ ಬಗ್ಗೆ ವಿಷಾದ, ಸಾಹಿತ್ಯ ಸಮ್ಮೇಳನಕ್ಕೂ, ಪಂಚಾಯ್ತಿ ಚುನಾವಣೆಗೂ ಎತ್ತಿಂದೆತ್ತಣ ಸಂಬಂಧವಯ್ಯಾ ಎಂಬ ಉಲ್ಲೇಖ ಹಾಗೂ ಉದ್ಗಾರ, ವಿನಾಕಾರಣ ರಾಜಕಾರಿಣಿಗಳು ಮೂಗು ತೂರಿಸುವುದರ ಬಗ್ಗೆ ಆಕ್ಷೇಪ. ಹೀಗೆ ಒಂದಲ್ಲ ನೂರಾರು ರೀತಿಯ ಪ್ರತಿಕ್ರಿಯೆಗಳು ೭೭ನೇ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಪಂಚಾಯ್ತಿ ಚುನಾವಣೆಯ ಕಾರಣಗಳಿಂದಾಗಿ ಮುಂದೂಡುತ್ತಿರುವುದರ ಬಗ್ಗೆ ಸಾಹಿತ್ಯವಲಯಗಳಿಂದ ಕೇಳಿ ಬರುತ್ತಿವೆ. ಇದು ಸಹಜ. ನನ್ನನ್ನೂ ಸೇರಿಸಿಕೊಂಡು, ಕನ್ನಡ ಪ್ರೀತಿಸುವ ಎಲ್ಲರಿಗೂ, ಸಾಹಿತ್ಯದ ಗಂಧ-ಗಾಳಿಯೇ...

ಅನಾಥವಾಗಿ ಹೋಗುತ್ತಿರುವ ಅಪರೂಪದ ಹಾಡುಗಳು

ಹಲವಾರು ಕಾರಣಗಳಿಂದ ಇಡೀ ವಿಶ್ವದಲ್ಲೇ ವಿಶಿಷ್ಟವಾದುದು ಭಾರತೀಯ ಚಿತ್ರರಂಗ. ಚಲನ ಚಿತ್ರಗಳಲ್ಲಿ ಹಾಡುಗಳೆಂಬ ಪರಿಕಲ್ಪನೆಯನ್ನು, ಬಹಶಃ ಭಾರತದಂಥಹ ಕೆಲವೇ ಕೆಲವು ದೇಶಗಳಲ್ಲಿ ಮಾತ್ರ ಕಾಣಲು ಸಾಧ್ಯ. ನಮ್ಮಲ್ಲಿ ಹಾಡುಗಳಿಗೆ ವಿಶೇಷವಾದ ಮಹತ್ವವಿದೆ. ಸಿನಿಮಾದಲ್ಲಿ ಹಾಡು ಒಂದು ಭಾಗವಾಗಿ ಬೆರೆತುಹೋಗುತ್ತದೆ. ಕೆಲವೊಮ್ಮೆ ಹಾಡುಗಳಿಂದಲೇ ಒಂದು ಚಿತ್ರದ, ಸನ್ನಿವೇಶದ, ಪಾತ್ರದ ಪರಿಚಯವಾಗಿಹೋಗುತ್ತದೆ. ಮಾತುಗಳಲ್ಲೇ ಎಲ್ಲವನ್ನೂ ಹೇಳಲು ಹಲವಾರು ಸಾರಿ ಸಾಧ್ಯವಾಗುವಿದಿಲ್ಲ. ಅಂಥಹ ಸಂದರ್ಭಗಳಲ್ಲೆಲ್ಲಾ ಹಾಡುಗಳು ಬಹಳ ಪರಿಣಾಮಕಾರಿಯಾಗಿ ಪ್ರೇಕ್ಷಕನಿಗೆ ಸಿನಿಮಾವನ್ನು ತಲುಪಿಸುವಲ್ಲಿ ಸಹಕಾರಿಯಾಗುತ್ತವೆ....