ಸಾಫ್ಟ್ ವೇರ್ ಎಂಜಿನೀಯರೊಬ್ಬನ ಹೃದಯ ಹಾರ್ಡ್ ಆದ ಕಥೆ
ಅಮೇರಿಕಾದ ಕ್ಯಾಲಿಫೊರ್ನಿಯಾದ ನಗರವೊಂದರಲ್ಲಿ ಗುಂಡಿನ ಸುರಿಮಳೆಗೈದು ಇಡೀ ನಗರವನ್ನೇ ತಲ್ಲಣಗೊಳಿಸಿದ ಈತ ಭಾರತೀಯನೆಂಬುದೇ ಕಹಿಯಾದ ಸತ್ಯ. ನಮ್ಮಲ್ಲಿ ಕಚ್ಚಾಟ, ಹೊಡೆದಾಟಗಳೆಲ್ಲಾ ಇದ್ದದ್ದೇ ಬಿಡಿ. ಕಿತ್ತಾಡಿ, ಬೈದಾಡಿ ಒಂದಾಗುವ ಅಥವಾ ಎಂದೂ ಒಂದಾಗದ ಸಾಕಷ್ಟು ಉದಾಹರಣೆಗಳಿವೆ. ಆಗದವರಿಗೆ ಶಾಪ ಹಾಕುವುದು ಅಥವಾ ಯಾವಾಗಲೂ ಕೇಡು ಬಯಸುವುದು, ಇನ್ನೂ ಸ್ವಲ್ಪ ಮುಂದುವರೆದು ಆತನ ಎಲ್ಲಾ ಕೆಲಸಗಳಲ್ಲೂ ಅಡ್ಡಗಾಲಾಕಿ ದಕ್ಕಿಸಿಕೊಡದಂತೆ ತಡೆಯುವುದು, ಇಲ್ಲವೇ ಆತನ ಜೊತೆ ತುಂಬಾ ಭಿನ್ನಾಭಿಪ್ರಾಯಗಳಿದ್ದರೆ, ಆತನನ್ನು ಶಾಶ್ವತವಾಗಿ ದೂರವಿಡುವುದು, ಇವು...