Author: universini

ವಾಣಿಯ ವೀಣೆಯ ಝೇಂಕಾರದಲಿ …

ಗಾನ ಸರಸ್ವತಿ ವಾಣಿಜಯರಾಂ ಧ್ವನಿ ಜೀವಜಲ, ಅದು ಒತ್ತಡದ ಬದುಕಿಗೊಂದು ಸಿಧ್ದೌಷಧಿ, ನೊಂದ ಮನಸ್ಸುಗಳಿಗೆ ಮುದನೀಡವ ಮಂದಾನಿಲ, ದಿನದ ಬಾಧೆಗಳೆಲ್ಲವನ್ನೂ ಮರೆಸಿ ಮಲಗಿಸುವ ಜೋಗುಳ. ನಾನು ವಾಣಿಜಯರಾಂ ಹಾಡಿರುವ ಕನ್ನಡ ಚಲನ ಚಿತ್ರ ಗೀತೆ, ಭಾವಗೀತೆ ಹಾಗೂ ಭಕ್ತಿಗೀತೆಗಳೆಲ್ಲವನ್ನು ಬಹುಪಾಲು ಕೇಳಿ ಮೈ-ಮನ ತುಂಬಿಸಿಕೊಂಡಿದ್ದೇನೆ. ಜೊತೆಗೆ, ಅವರ ಹಿಂದೀ ಹಾಡುಗಳು, ಗಜಲ್‍ಗಳು, ಭಜನ್‍ಗಳು, ಸಂಸ್ಕೃತ ಶ್ಲೋಕಗಳು ಎಲ್ಲವನ್ನೂ ಅಕ್ಷರಾದಿಯಾಗಿ ಆನಂದಿಸಿದ್ದೇನೆ. ಪ್ರತಿಯೊಂದು ಹಾಡಿನಲ್ಲೂ ಅವರು ಭಾಷೆಯನ್ನು ಬಳಸುವ ರೀತಿ, ಭಾವ...

ಕನ್ನಡ ಚಿತ್ರರಂಗದ ಕುತ್ತಿಗೆ ಹಿಸುಕುತ್ತಿರವ ಡಬ್ಬಿಂಗ್ ನಿಷೇಧವೆಂಬ ಭೂತ

ತೀರಾ ಇತ್ತೀಚೆಗೆ ಅಂದರೆ “ರಂಗೀತರಂಗ” ಹಾಗು “ಬಾಹುಬಲಿ” ಎಂಬ ಕನ್ನಡದ ಹಾಗು ಒಂದು ರೀತಿಯಲ್ಲಿ ಕನ್ನಡಿಗರನ್ನೊಳಗೊಂಡಿರುವ ತೆಲುಗಿನ ಚಿತ್ರಗಳು ಚಿತ್ರಮಂದಿರಕ್ಕಾಗಿ ನಡೆಸಿದ ಪೈಪೋಟಿಯನ್ನು ಕರ್ನಾಟಕದ ಜನ ವಿಶಾಲವಾದ ತೆರೆಯ ಮೇಲೆಯೇ ವೀಕ್ಷಿಸಿದ್ದಾಯಿತು. ಒಂದು ಅತೀ ದೊಡ್ಡ ಬಜೆಟ್ಟಿನ, ಅತೀ ದೊಡ್ಡ ಜನಗಳ ಬೆಂಬಲದಿಂದ ನಿರಾಯಾಸವಾಗಿ ಕನ್ನಡನಾಡಿನಲ್ಲಿ ಬಿಡುಗಡೆಯಾದ ತೆಲುಗಿನವರ ಚಿತ್ರ. ಇನ್ನೊಂದು ಹೊಸಬರ, ಹೊಸತನದ ಹಣೆಪಟ್ಟಿಯೊತ್ತು, ಪ್ರೇಕ್ಷಕನಲ್ಲಿ ಹೊಸ ಭರವಸೆ ಹುಟ್ಟಿಸಿಲೇಬೆಕೆಂಬ ಹಂಬಲ ಹೊತ್ತು ಕನ್ನಡಿಗರ ನಾಡಿನಲ್ಲಿ ನಿಲ್ಲಲು ಹೆಣಗಾಡಿದ...

ಕರಾಳ ಕೊರೋನ

ಉಸಿರು ವಿಷವಾಗಿಸರಿಯೇ ಬೆಸವಾಗಿಬದುಕು ಹಳಿತಪ್ಪಿಹಸಿದಿರುವವರು ಎಷ್ಟೋ? ಬಂದು ಯಾವಾಗನುಂಗಿ ಹಾಕುವುದೋಒಂದೂ ತಿಳಿಯದೆಕುಸಿದಿರುವವರು ಎಷ್ಟೋ? ಹೊರಗೆ ಜಗವಿಲ್ಲದೆಒಳಗೆ ನಗುವಿಲ್ಲದೆಇದ್ದಲ್ಲೇ ಭೀತಿಯಲಿನಡುಗುವವರು ಎಷ್ಟೋ? ತಮ್ಮವರು ತಮಗಿಲ್ಲದೆನೋವಿನಲಿ ಜೊತೆಯಿಲ್ಲದೆಸತ್ತರೂ ಸದ್ದಿಲ್ಲದಂತೆನಡೆದವರು ಅದೆಷ್ಟೋ?

ಕಚಗುಳಿ

ನೀ ಕಣ್ಣೆದುರು ಬಂದು ನಿಂತಾಗನಾನು ಮಾತಾನಾಡಲಾಗಲಿಲ್ಲಅಂದಮಾತ್ರಕ್ಕೆ ತಿಳಿಯದಿರುಏನೂ ಇದ್ದಿಲ್ಲವೆಂದು ನನ್ನ ಬಳಿ ದೂರೊಂದಿದೆ ಕೇಳು ನೀನುಪ್ರತಿ ಇರುಳೂ, ನನ್ನ ಎದೆಯೊಳಗೆತಡೆಯಲಾರೆ ಬೇಡ ಎಂದರೂನಿಲ್ಲಿಸುವುದಿಲ್ಲವೇಕೆ ಕಚಗುಳಿ?

ಆಸೆ

ನಿನ್ನ ಚೆಂದುಟಿಗಳರಸ ಹೀರುವ ದುಂಭಿನಾನಾಗುವಾಸೆ ನಿನ್ನ ಕಣ್ಣ ಕಾಸರದಿಸಣ್ಣ ಮೀನಾಗಿ ನಾನುತೇಲಾಡುವಾಸೆ ನಿನ್ನ ನಡುವನು ಬಳಸಿಬೆನ್ನನಾಳುವ ಜಡೆಯಚೆನ್ನು ಸವಿವಾಸೆ ನಿನ್ನ ಚೆಲುವುನ ನಗೆಯನಿಂತ ನಿಲುವಿನ ಬಗೆಯಕಣ್ತುಂಬಿಸಿಕೊಳ್ಳುವಾಸೆ ನಿನ್ನ ಮಲ್ಲಿಗೆಯ ಮುಡಿಗೆಮುಂಗುರುಳಿನ ಮುಗಿಲಿಗೆಏಣಿಯಿಡುವಾಸೆ ನೀನು ಸಿಕ್ಕಿದರೆ ಎದುರುತಪ್ಪು-ಒಪ್ಪುಗಳ ಮರೆತುನಕ್ಕುಬಿಡುವಾಸೆ ನೀನು ಒಪ್ಪಿದರೆ ಒಮ್ಮೆಅಪ್ಪಿ ಕೆನ್ನೆಗೆ, ಹಣೆಗೆಮುತ್ತನಿಡುವಾಸೆ ನಿನ್ನ ದೇಹದ ಸಿರಿಗೆಮುದ್ದಿನರಗಿಣಿಮರಿಗೆಕಾಮನ ಬಿಲ್ಲೂಡುವಾಸೆ ರತಿಯ ಮೀರಿಸುರತಿಯಮೈಮರೆತು ಮೋಹದಲಿಎತ್ತಿಕೊಳ್ಳುವಾಸೆ ತಾರೆ ಗೆಳತಿಯೇ ನಿನ್ನಹತ್ತಿರಕೆ ಬಾ ಎಂದುಕೈ ಚಾಚುವಾಸೆ

ಗುಮ್ಮ

ಆ ರಾತ್ರಿ ಏಕೋ, ಮಲಗಲಾಗಲಿಲ್ಲ ಮನಸು ಮಾಮೂಲಿನಂತಿರಲಿಲ್ಲ ಎದ್ದು ಕೂತೆ, ಏನೋ ಸರಿಯಿಲ್ಲವೆನಿಸಿತ್ತು, ದಣಿವಿತ್ತು ನಿದ್ದೆಯಲ್ಲೇ ನಡೆದೆ ಕಿಟಕಿಯ ಕಡೆ ತುಸು ತೆರೆಕೊಂಡಂತಿತ್ತದರ ಬಾಗಿಲು ಉರಿವ ಧಗೆ, ಗಾಳಿಗೇನಾಗಿತ್ತೋ ಕಾಣೆ ಪೂರ್ತಿ ಸರಿಸಿದೆ ಕುರುಡನೆಂದೆನಿಸಿತಾ ಒಂದು ಕ್ಷಣ ಕಾಣದೇನೂ ಆಚೆಕಡೆ, ಅನಂತದೆಡೆಗೂ ಕಾಡ ಕತ್ತಲೆ, ಬಾನಲ್ಲೂ ಹೊಳಹಿಲ್ಲ, ಬೆಳಕಿಂಡಿಯಿಲ್ಲ ಇಂತಿಪ್ಪ ಇರಿಳಿನಲಿ, ಅಲ್ಲೆಲ್ಲೋ ದೂರದಲ್ಲಿ ಪಳಕ್ಕನರಳಿದ ಕಣ್ಣುಗಳು, ತಟಕ್ಕನೆ ಮಾಯ ಪುಡಿಯಾಯ್ತು ಗುಂಡಿಗೆ ಸಿಡಿಲೊಡೆದ ಭೀತಿಯಲ್ಲೂ ಕಣ್ದಿಟ್ಟಿ ಕಿಟಕಿಯಲಿ ಮೈ...

ಆರೋಹಣ

ಪ್ರೇಮ ಪರ್ವತಾರೋಹಣಮಾಡೇ ಹೊರಡೋಣಎದೆಯ ಭಾವಗಳ ಬಾವುಟಅಲ್ಲೇ ಚಿತ್ರಿಸಿ ಹಾರಿಸೋಣನೆನಪಿಗಿರಲೊಂದು ಸಂಪುಟಮುದ್ರಿಸಿ ಇಟ್ಟುಕೊಳ್ಳೋಣ! ಏರುವಾದಿಯಲಿ ಕಾಡಿವೆಹಾಡೋ ಹಕ್ಕಿಗಳು, ಗೂಡಿವೆಹುಲಿ-ಚಿರತೆ ಸಿಂಹಾದಿವಿಷಜಂತು ಕಾದಿವೆಏನೇ ಎದುರಾಗಲಿ, ಗುರಿ-ಬಿಡದ ದಾರಿ ಹಿಡಿಯೋಣ! ಅಲ್ಲಿ ಹರಿವ ಜಲಪಾತದಲಿಹಳತ ಕೊಳೆ ತಳ ಸೇರಲಿಜಗವ ಮರೆತು, ಜನರ ಹೊರತುಹೊಸತು ಬಾಳನು ಬಿತ್ತೋಣಎಷ್ಟು ಬೇಕಷ್ಟರಲ್ಲಿ, ಹೇಗೆಬದುಕುವುದೆಂದು ತಿಳಿಸೋಣ!

ಒಂಟಿತನ

ಬಾನ ಬಯಲಾಗಿದೆಬತ್ತಲೆ, ಬರೀ ಕತ್ತಲೆಮುನಿಸಿನಿಂದಿದೆ ನಭಭೂದೇವಿಯ ಮೇಲೆ ಚಂದಿರನ ಸುಳಿವಿಲ್ಲಬೆಳಕನ್ನು ತರಲಿಲ್ಲತಾರೆಗಳೂ ತಾವೇಕೊಇಂದವನ ಬಳಸಿಲ್ಲ ಗಾಳಿಗೂ ಕಚಗುಳಿಯಮೂಡಿಸುವ ಮನಸಿಲ್ಲಮೋಡಕೂ ಅದರೊಡನೆತಾನಾಡುವ ಒಲವಿಲ್ಲ ಹೂವಾದರೂ ಉಸಿರಾಡಿಗಂಧವನು ಬಿಡುತ್ತಿಲ್ಲಮಳೆಯಾಗಿದೆ, ಮರದಿಂದಜೀರುಂಢೆಯ ದನಿಯಿಲ್ಲ ವಿಧಿಯೊಡನೆ ಕಾದಾಡಿಬರಿಗೈಯ್ಯೇ ನಿನಗಿಂದುದಾರಿ ನೋಡೆನು ಫಲ?ಪ್ರಿಯತಮನ ಬರುವಿಲ್ಲ

ಪ್ರಶ್ನೆಗಳು

ನಾ ನಿನ್ನಕೇಳಬೇಕೆಂದುಕೊಳ್ಳುತ್ತಿದ್ದೆಅದೇಕೆ ಹಾಗೆ,ನೋಡಿ ನಕ್ಕಿದೆ? ನಾ ಬಹುದಿನಗಳಿಂದಲೂಬೆಳೆಸಿ, ಪೋಷಿಸಿದಎಳೆಯ ಭಾವನೆಗಳುನಿನಗೆ ಅಪಹಾಸ್ಯವೆ? ಮಳೆಯ ಬಿಲ್ಲಿನೊಳುಎದೆಯ ತುಂಬಿರಲುಬಗೆ ಬಗೆಯ ಕನಸುಗಳವುನಿನಗೆ ಲಘುವಾದವೆ? ಚೆಲುವ ಕಾಂತಿಯನುಒಲವ ಪ್ರಣತಿಯಲಿಟ್ಟುಪೂಜೆ ಮಾಡಿದ ಪರಿಯುನಿನಗೆ ಅವಮಾನವೆ? ನಗೆಹೂವ ರಾಶಿಯನುಮೊಗಹೊತ್ತ ರೀತಿಯನುಕಂಡು ಮೋಹಿಸಿದ್ದೊಂದುನಿನಗೆ ಅಪರಾಧವೆ? ನೀ ಬಹುಶಃ ನಾನಾಗಿನನ್ನಂತೆ ನಿನಗಾಗಿಪರಿತಪಿಸಿ ಪರದಾಡಿದರೆನಿನಗೆ ಅನುಕೂಲವೆ?

ದಿಟ್ಟತನ

ಎದೆಯಾಳದೊಳಗೆಲ್ಲೋಕಟ್ಟಿ ಬಚ್ಚಿಟ್ಟಿರುವಕನಸು ಬುತ್ತಿಯ ಬಗ್ಗೆನಿನಗೆತಿಳಿಯಿತಾದರು ಹೇಗೆ? ಚೆಲುವಿನಾಸರೆಯೊಸೆದುಕಣ್ಣೊಳಗಿಂದ ಅಲ್ಲಿಳಿದುನೀನವನು ಹೆಕ್ಕಿ ಹೆಕ್ಕಿಕತ್ತು ಹಿಸುಕುವುದನುಕಂಡ ಮೇಲೂಮೂರ್ಖನಾಗಲಾದೀತೆ? ಹೋಗೆ ಹೋಗೆ!