Monthly Archive: May 2017

ಆರೋಹಣ

ಪ್ರೇಮ ಪರ್ವತಾರೋಹಣಮಾಡೇ ಹೊರಡೋಣಎದೆಯ ಭಾವಗಳ ಬಾವುಟಅಲ್ಲೇ ಚಿತ್ರಿಸಿ ಹಾರಿಸೋಣನೆನಪಿಗಿರಲೊಂದು ಸಂಪುಟಮುದ್ರಿಸಿ ಇಟ್ಟುಕೊಳ್ಳೋಣ! ಏರುವಾದಿಯಲಿ ಕಾಡಿವೆಹಾಡೋ ಹಕ್ಕಿಗಳು, ಗೂಡಿವೆಹುಲಿ-ಚಿರತೆ ಸಿಂಹಾದಿವಿಷಜಂತು ಕಾದಿವೆಏನೇ ಎದುರಾಗಲಿ, ಗುರಿ-ಬಿಡದ ದಾರಿ ಹಿಡಿಯೋಣ! ಅಲ್ಲಿ ಹರಿವ ಜಲಪಾತದಲಿಹಳತ ಕೊಳೆ ತಳ ಸೇರಲಿಜಗವ ಮರೆತು, ಜನರ ಹೊರತುಹೊಸತು ಬಾಳನು ಬಿತ್ತೋಣಎಷ್ಟು ಬೇಕಷ್ಟರಲ್ಲಿ, ಹೇಗೆಬದುಕುವುದೆಂದು ತಿಳಿಸೋಣ!

ಒಂಟಿತನ

ಬಾನ ಬಯಲಾಗಿದೆಬತ್ತಲೆ, ಬರೀ ಕತ್ತಲೆಮುನಿಸಿನಿಂದಿದೆ ನಭಭೂದೇವಿಯ ಮೇಲೆ ಚಂದಿರನ ಸುಳಿವಿಲ್ಲಬೆಳಕನ್ನು ತರಲಿಲ್ಲತಾರೆಗಳೂ ತಾವೇಕೊಇಂದವನ ಬಳಸಿಲ್ಲ ಗಾಳಿಗೂ ಕಚಗುಳಿಯಮೂಡಿಸುವ ಮನಸಿಲ್ಲಮೋಡಕೂ ಅದರೊಡನೆತಾನಾಡುವ ಒಲವಿಲ್ಲ ಹೂವಾದರೂ ಉಸಿರಾಡಿಗಂಧವನು ಬಿಡುತ್ತಿಲ್ಲಮಳೆಯಾಗಿದೆ, ಮರದಿಂದಜೀರುಂಢೆಯ ದನಿಯಿಲ್ಲ ವಿಧಿಯೊಡನೆ ಕಾದಾಡಿಬರಿಗೈಯ್ಯೇ ನಿನಗಿಂದುದಾರಿ ನೋಡೆನು ಫಲ?ಪ್ರಿಯತಮನ ಬರುವಿಲ್ಲ

ಪ್ರಶ್ನೆಗಳು

ನಾ ನಿನ್ನಕೇಳಬೇಕೆಂದುಕೊಳ್ಳುತ್ತಿದ್ದೆಅದೇಕೆ ಹಾಗೆ,ನೋಡಿ ನಕ್ಕಿದೆ? ನಾ ಬಹುದಿನಗಳಿಂದಲೂಬೆಳೆಸಿ, ಪೋಷಿಸಿದಎಳೆಯ ಭಾವನೆಗಳುನಿನಗೆ ಅಪಹಾಸ್ಯವೆ? ಮಳೆಯ ಬಿಲ್ಲಿನೊಳುಎದೆಯ ತುಂಬಿರಲುಬಗೆ ಬಗೆಯ ಕನಸುಗಳವುನಿನಗೆ ಲಘುವಾದವೆ? ಚೆಲುವ ಕಾಂತಿಯನುಒಲವ ಪ್ರಣತಿಯಲಿಟ್ಟುಪೂಜೆ ಮಾಡಿದ ಪರಿಯುನಿನಗೆ ಅವಮಾನವೆ? ನಗೆಹೂವ ರಾಶಿಯನುಮೊಗಹೊತ್ತ ರೀತಿಯನುಕಂಡು ಮೋಹಿಸಿದ್ದೊಂದುನಿನಗೆ ಅಪರಾಧವೆ? ನೀ ಬಹುಶಃ ನಾನಾಗಿನನ್ನಂತೆ ನಿನಗಾಗಿಪರಿತಪಿಸಿ ಪರದಾಡಿದರೆನಿನಗೆ ಅನುಕೂಲವೆ?

ದಿಟ್ಟತನ

ಎದೆಯಾಳದೊಳಗೆಲ್ಲೋಕಟ್ಟಿ ಬಚ್ಚಿಟ್ಟಿರುವಕನಸು ಬುತ್ತಿಯ ಬಗ್ಗೆನಿನಗೆತಿಳಿಯಿತಾದರು ಹೇಗೆ? ಚೆಲುವಿನಾಸರೆಯೊಸೆದುಕಣ್ಣೊಳಗಿಂದ ಅಲ್ಲಿಳಿದುನೀನವನು ಹೆಕ್ಕಿ ಹೆಕ್ಕಿಕತ್ತು ಹಿಸುಕುವುದನುಕಂಡ ಮೇಲೂಮೂರ್ಖನಾಗಲಾದೀತೆ? ಹೋಗೆ ಹೋಗೆ!

ಮಾತು-ಮೌನ

ನೆನಪಿಸಿಕೊ, ಆಗಹೇಗೆ ಜೊತೆ-ಜೊತೆಗೆ ಹೆಜ್ಜೆಯೊಳಗೆಜ್ಜೆಯಿಟ್ಟುಲಜ್ಜೆ ಎಂಬುದನ್ನು ಬದಿಗಿಟ್ಟುಬಾಂಬಣ್ಣ ಕರಗುವವರೆಗೂಹರಟುತ್ತಿದ್ದದ್ದು ಅದೆಷ್ಟು? ನರ ನರಗಳೂ ನಿಮಿರಿ,ಅಂಗಾಂಗಗಳೆಲ್ಲವೂ ಅದುರಿಹೊಟ್ಟೆ ಕಟ್ಟುವವರೆಗೂಬಿಡದೆ ನಕ್ಕಿಬಿಟ್ಟಿದ್ದೆಷ್ಟು? ಯಾರಿರಲಿ, ಬಿಡಲಿಏನಂದರೂ ಅನ್ನಲಿನಮಗೇನು? ಲೆಕ್ಕಿಸದೆ, ಇಬ್ಬರು-ಒಬ್ಬರಾಗಿ ಅಲೆದದ್ದೆಷ್ಟು? ಊಹಿಸಿಕೋ ಈಗಕಾಯುತಿರುವೆವು ಹೇಗೆ? ಮತ್ಸರವ ಮುಂದಿಟ್ಟುಬೆಳೆದ ಭಾವಗಳ ಬಲಿಗಿಟ್ಟುಕಾದು ಬೂದಿಯಾಗುವವರೆಗೂಎದೆಯ ಕೆಂಡದೊಳಗಿಟ್ಟು ಮಾತೆಲ್ಲಾ ಮೌನವಾಗಿಮೌನವದು ನೀರಾಗಿಕಣ್ಣೊಳಗೆ ಕರಗಿ ಜಾರಿದರೂಅರಿಯದೆ ಪಣವ ತೊಟ್ಟು ಬೆರೆಯಲಿಲ್ಲ ಮತ್ತೊಮ್ಮೆಉಳಿಸಬಹುದಿತ್ತಲ್ಲವೆ? ಒಲುಮೆಆದುದೆಲ್ಲವನು ಮರೆತುನಕ್ಕುಬಿಟ್ಟಿದ್ದರೆ ಹಠಬಿಟ್ಟು