Monthly Archive: September 2020

ಕಚಗುಳಿ

ನೀ ಕಣ್ಣೆದುರು ಬಂದು ನಿಂತಾಗನಾನು ಮಾತಾನಾಡಲಾಗಲಿಲ್ಲಅಂದಮಾತ್ರಕ್ಕೆ ತಿಳಿಯದಿರುಏನೂ ಇದ್ದಿಲ್ಲವೆಂದು ನನ್ನ ಬಳಿ ದೂರೊಂದಿದೆ ಕೇಳು ನೀನುಪ್ರತಿ ಇರುಳೂ, ನನ್ನ ಎದೆಯೊಳಗೆತಡೆಯಲಾರೆ ಬೇಡ ಎಂದರೂನಿಲ್ಲಿಸುವುದಿಲ್ಲವೇಕೆ ಕಚಗುಳಿ?

ಆಸೆ

ನಿನ್ನ ಚೆಂದುಟಿಗಳರಸ ಹೀರುವ ದುಂಭಿನಾನಾಗುವಾಸೆ ನಿನ್ನ ಕಣ್ಣ ಕಾಸರದಿಸಣ್ಣ ಮೀನಾಗಿ ನಾನುತೇಲಾಡುವಾಸೆ ನಿನ್ನ ನಡುವನು ಬಳಸಿಬೆನ್ನನಾಳುವ ಜಡೆಯಚೆನ್ನು ಸವಿವಾಸೆ ನಿನ್ನ ಚೆಲುವುನ ನಗೆಯನಿಂತ ನಿಲುವಿನ ಬಗೆಯಕಣ್ತುಂಬಿಸಿಕೊಳ್ಳುವಾಸೆ ನಿನ್ನ ಮಲ್ಲಿಗೆಯ ಮುಡಿಗೆಮುಂಗುರುಳಿನ ಮುಗಿಲಿಗೆಏಣಿಯಿಡುವಾಸೆ ನೀನು ಸಿಕ್ಕಿದರೆ ಎದುರುತಪ್ಪು-ಒಪ್ಪುಗಳ ಮರೆತುನಕ್ಕುಬಿಡುವಾಸೆ ನೀನು ಒಪ್ಪಿದರೆ ಒಮ್ಮೆಅಪ್ಪಿ ಕೆನ್ನೆಗೆ, ಹಣೆಗೆಮುತ್ತನಿಡುವಾಸೆ ನಿನ್ನ ದೇಹದ ಸಿರಿಗೆಮುದ್ದಿನರಗಿಣಿಮರಿಗೆಕಾಮನ ಬಿಲ್ಲೂಡುವಾಸೆ ರತಿಯ ಮೀರಿಸುರತಿಯಮೈಮರೆತು ಮೋಹದಲಿಎತ್ತಿಕೊಳ್ಳುವಾಸೆ ತಾರೆ ಗೆಳತಿಯೇ ನಿನ್ನಹತ್ತಿರಕೆ ಬಾ ಎಂದುಕೈ ಚಾಚುವಾಸೆ