Category: ಸಿನಿಗವನ

ವಿರಕ್ತ ಭಾವದಲಿ

ನಿಶ್ಯಬ್ಧದೆಡೆಗೆನಿರ್ದಿಷ್ಟ ಗುರಿಯಿಲ್ಲದೆ ನಿಂತುಯೋಚಿಸಿದರೇನು ಬಂತುಗುರಿಯಿಲ್ಲದ ಬಾಳುದೊರೆಯಿಲ್ಲದ ನಾಡುಎಂಬಂಥಹ ಈ ಸ್ಥಿತಿಯಲ್ಲಿನಗಬಾರದೆಂದೆನಿಸಿದರೂನಗುತಾನಂದದಲಿಅಳಬೇಕೆನಿಸಿದರೂಅಳಲಾಗದ ನೋವಿನಲಿಎಷ್ಟು ದಿನ ಹೀಗೇಕಾಲ ಕಳೆಯಲಿ? ಕಣ್ಣು ಮುಚ್ಚಿ ಕ್ಷಣವೊಮ್ಮೆನಿಶ್ಚಿಂತೆಯಲಿಎಲ್ಲವನ್ನೂ ಮರೆತು,ಎಲ್ಲರನ್ನೂ ತೊರೆದು,ಎಲ್ಲರಿದ್ದರೂ ಯಾರಿರದೇ,ಎಲ್ಲೆ ಮೀರಲೂ ಕೈಲಾಗದೇಎಲ್ಲೋ ಮುಖಮಾಡಿ ನಿಂತನನ್ನ ದಯನೀಯ ಗತಿ ಕಂಡುಕೇಳದಿದ್ದವರೆಲ್ಲಾ ಕೇಳುವಹೇಳಲಾಗದಿದ್ದವರೆಲ್ಲಾಬುದ್ಧಿ ಹೇಳುವ ಆ ದಿನಬರುವ ಮೊದಲೇಪ್ರಶಾಂತತೆಯತ್ತ ದಿಟ್ಟಿನೆಟ್ಟುಮುಂದೆ ಹೋಗಲೇ?

ಮಿಲನಕಾಲ

ತಂದಾನೋ ತಂದಾನೋ ತಾನೋತಂದಾನೋ ತಂದಾನೋ ತಾನೋತಂದಾನೋ ತಂದಾನೋ ತಾನೀ ತಂದಾನೋ ಮುಸ್ಸಂಜೆ ಹೊತ್ತಲ್ಲಿ ಮೋಡಮುತ್ತಿನ ನೀರಲ್ಲಿ ಹಾಡಹಾಡುತ್ತಾ ಭೂಮಿಗೆ ರಂಗು ತಂದಾವೋ… ಎತ್ತಿಂದ ಬಂದಾವೋ ಹೀಗೆಹುಟ್ಟುತ್ತಾ ಒಂದೊಂದೇ ಹಾಗೇಒಟ್ಟಾಗಿ ಬಾನಲ್ಲಿ ತಾರೆ ನಕ್ಕಾವೋ… ಹೊತ್ತಾರೆ ಸೂರ್ಯನ ಹಾಗೇಕೆಂಪಾದ ಕೆನ್ನೆಯ ಮ್ಯಾಗೆಚೆಂದಾದ ರಂಗೋಲಿಗಳು ಮೂಡ್ಯಾವೋ… ಸಂಗಾತಿ ಬಾರೆಂದು ಕೂಗಿಕಣ್ಣಲ್ಲಿ ಸಂಕೋಚ ತೂಗಿಹೆಣ್ಣಿನ ಮನಸಲ್ಲಿ ಆಸೆ ಮೂಡ್ಯಾವೋ… ಚಂದಿರ ಬಂದಾನೋ ಅಲ್ಲಿಮಂದಾರ ನಕ್ಕಾಳೋ ಇಲ್ಲಿಒಂದಾಗೋ ಸಂದೇಶ ಹೇಳಿಕೊಂಡಾವೋ… ಬಾನಲ್ಲಿ ಹುಣ್ಣಿಮೆ ಚೆಲ್ಲಿಬಯಲೆಲ್ಲಾ ಹೂಗಂಧ...