Category: ಸಿನಿಲೇಖನ

ಮತ್ತೇ ಬರಲಾರಿರಾ ಅಶ್ವಥ್, ಅನಂತಸ್ವಾಮಿ, ಕಾಳಿಂಗರಾಯರೇ?

“ಅಯ್ಯೋ ವಿಧಿಯೇ! ಎಂಥಹ ಧ್ವನಿ ನಿಂತು ಹೋಯಿತು”. ಇದು ನನ್ನೊಬ್ಬನದಲ್ಲ. ಇಡೀ ಕನ್ನಡಿಗರೆದೆಯಾಳದಿಂದೊಟ್ಟಿಗೆ ಹೊರಬಂದ ನೋವಿನ ಮಾತುಗಳು. ಕನ್ನಡ ಸುಗಮ ಸಂಗೀತಲೋಕವನ್ನಾಳಿದ ದೊರೆ ಸಿ.ಅಶ್ವಥ್ ಅವರ ನಿರ್ಗಮದಿಂದ, “ಇನ್ನೆಲ್ಲಿ? ಮತ್ತೆ ಕನ್ನಡದಲ್ಲಿ, ಆ ವೈಭವದ ದಿನಗಳು” ಎಂದು ಕನ್ನಡ ಕಾವ್ಯ ಜಗತ್ತಿನ ಕುಲಬಾಂಧವರೆಲ್ಲಾ ಗೋಳಿಟ್ಟ ದುರ್ದಿನಳವು. ಸುಗಮ ಸಂಗೀತ ಪಿತಾಮಹ ಕಾಳಿಂಗರಾಯರ ಕಾಲಾನಂತರ ಕನ್ನಡದಲ್ಲಿ ಮತ್ತೆ ಕನ್ನಡ ಕಾವ್ಯಗಳನ್ನು “ಜನಮನಗಳಿಗೆ ತಲುಪಿಸಲಾಗುವುದಿಲ್ಲವಲ್ಲಾ?” ಎಂದು ಎಲ್ಲಾ ಕೈಚೆಲ್ಲಿ ಕುಂತಿದ್ದ ಕಾಲವದು. ಕಾಳಿಂಗರಾಯರಷ್ಟೇ...

ಸಾಫ್ಟ್ ವೇರ್ ಎಂಜಿನೀಯರೊಬ್ಬನ ಹೃದಯ ಹಾರ್ಡ್ ಆದ ಕಥೆ

ಅಮೇರಿಕಾದ ಕ್ಯಾಲಿಫೊರ್ನಿಯಾದ ನಗರವೊಂದರಲ್ಲಿ ಗುಂಡಿನ ಸುರಿಮಳೆಗೈದು ಇಡೀ ನಗರವನ್ನೇ ತಲ್ಲಣಗೊಳಿಸಿದ ಈತ ಭಾರತೀಯನೆಂಬುದೇ ಕಹಿಯಾದ ಸತ್ಯ. ನಮ್ಮಲ್ಲಿ ಕಚ್ಚಾಟ, ಹೊಡೆದಾಟಗಳೆಲ್ಲಾ ಇದ್ದದ್ದೇ ಬಿಡಿ. ಕಿತ್ತಾಡಿ, ಬೈದಾಡಿ ಒಂದಾಗುವ ಅಥವಾ ಎಂದೂ ಒಂದಾಗದ ಸಾಕಷ್ಟು ಉದಾಹರಣೆಗಳಿವೆ. ಆಗದವರಿಗೆ ಶಾಪ ಹಾಕುವುದು ಅಥವಾ ಯಾವಾಗಲೂ ಕೇಡು ಬಯಸುವುದು, ಇನ್ನೂ ಸ್ವಲ್ಪ ಮುಂದುವರೆದು ಆತನ ಎಲ್ಲಾ ಕೆಲಸಗಳಲ್ಲೂ ಅಡ್ಡಗಾಲಾಕಿ ದಕ್ಕಿಸಿಕೊಡದಂತೆ ತಡೆಯುವುದು, ಇಲ್ಲವೇ ಆತನ ಜೊತೆ ತುಂಬಾ ಭಿನ್ನಾಭಿಪ್ರಾಯಗಳಿದ್ದರೆ, ಆತನನ್ನು ಶಾಶ್ವತವಾಗಿ ದೂರವಿಡುವುದು, ಇವು...

ಅಮಾನವೀಯ ಬದುಕಿನ ಅಪಮೌಲ್ಯಗಳು

ನಮ್ಮ ಬದುಕನ್ನೂ, ಬದುಕುತ್ತಿರುವ ರೀತಿಯನ್ನೂ ಒಮ್ಮೆ ಅವಲೋಕಿಸಿ ನೋಡಿದರೆ ಎಂಥಹ ಹೇಸಿಗೆಯಾಗುತ್ತದೆ ಎಂದು ಹೇಳಲಾಗುವುದಿಲ್ಲ. ಮನುಷ್ಯನ ಹುಟ್ಟು, ಸಾವು ಹಾಗೂ ಬದುಕುಗಳು ಇತ್ತೀಚೆಗಂತೂ ಅನರ್ಥ ಹಾದಿ ಹಿಡಿದು ನೀರಸವಾಗಿ ಪರಿಣಮಿಸಿವೆ. ಜೀವನ ಯಾಂತ್ರಿಕವಾಗಿದೆ. ಭಾವನಾತ್ಮಕತೆಗೆ ಬೆಲೆಯಿಲ್ಲ. ನೈತಿಕತೆಯ ಅಧಃಪತನವಾಗಿ ಜೀವನದ ಮೌಲ್ಯಗಳೆಲ್ಲಾ ಗಾಳಿಪಾಲಾಗಿವೆ. ಇಂಥಹ ಅಸಂಸ್ಕೃತ ಕಾಲದೊಳಗೆ ನಮಗೂ ಹೀಗೇ ಬದುಕಬೇಕೆಂಬ ಹಂಬಲಗಳಿಲ್ಲ. ಅಪಮೌಲ್ಯಗಳು ಅತಿಯಾಗಿ ಮಾನವ ತನ್ನ ನೀಯತ್ತೆಂಬುದನ್ನು ಹರಾಜು ಮಾಡಿ ಎಲ್ಲಿ ಹೇಗಾದರೂ ಬದುಕುವುದಷ್ಟನ್ನೇ ನೋಡುತ್ತಿದ್ದಾನೆ. ಮನುಷ್ಯನ...

ನಾನೇಕೆ ಡೈರಿ ಬರೆಯುತ್ತೇನೆ?

ನಾನು ಎಷ್ಟೋ ಸಾರಿ ದಿನಚರಿ ಬರೆಯುವುದರ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದೆ. ನಮ್ಮ ಮನಸ್ಸಿನಂತರ್ಭಾವಗಳನ್ನು ತೆರೆದಿಡುವುದರಲ್ಲಿ ತಪ್ಪಾದರೂ ಏನಿದೆ? ಮಡುಗಟ್ಟಿದಂತಿರುವ ನಮ್ಮ ಜೀವನೋತ್ಸಾಹಗಳನ್ನು ಕೆರಳಿಸಲು ಇದೊಂದು ಸಫಲ ಪ್ರಯತ್ನವೇ ಸರಿ. ಅದಕ್ಕೆಂದೇ ನಾವುಗಳು ನಮ್ಮ ಅಕೃತ್ಯಗಳನ್ನೂ ಪ್ರಾಮಾಣಿಕವಾಗಿ ದಾಖಲಿಸಬೇಕಾಗುತ್ತದೆ. ಇದರಿಂದ ನಮ್ಮ ನೆನಪಿಗೂ ಮೀರಿದದೆಷ್ಟೋ ಸತ್ಯಗಳು ನಂತರದ ದಿನಗಳಲ್ಲಿ ನೆನಪಿಗೆ ಬರುತ್ತವೆ. ಆಗ ನಾವು ನಮ್ಮ ಹಿಂದಿನ ಸ್ಥಿತಿ-ಗತಿಗಳ ತುಲನೆ ಮಾಡಲು ಕಾರ್ಯಮಗ್ನರಾಗುತ್ತೇವೆ. ಕಾಲದಡಿಯಲ್ಲಿ ಅದೃಶ್ಯವಾಗಿದ್ದ ಬಾಲ್ಯ, ಯೌವ್ವನ ಅಥವಾ ವೃದ್ಧಾಪ್ಯದ...