ಕರಾಳ ಕೊರೋನ

ಉಸಿರು ವಿಷವಾಗಿ
ಸರಿಯೇ ಬೆಸವಾಗಿ
ಬದುಕು ಹಳಿತಪ್ಪಿ
ಹಸಿದಿರುವವರು ಎಷ್ಟೋ?

ಬಂದು ಯಾವಾಗ
ನುಂಗಿ ಹಾಕುವುದೋ
ಒಂದೂ ತಿಳಿಯದೆ
ಕುಸಿದಿರುವವರು ಎಷ್ಟೋ?

ಹೊರಗೆ ಜಗವಿಲ್ಲದೆ
ಒಳಗೆ ನಗುವಿಲ್ಲದೆ
ಇದ್ದಲ್ಲೇ ಭೀತಿಯಲಿ
ನಡುಗುವವರು ಎಷ್ಟೋ?

ತಮ್ಮವರು ತಮಗಿಲ್ಲದೆ
ನೋವಿನಲಿ ಜೊತೆಯಿಲ್ಲದೆ
ಸತ್ತರೂ ಸದ್ದಿಲ್ಲದಂತೆ
ನಡೆದವರು ಅದೆಷ್ಟೋ?

You may also like...

Leave a Reply