ಪ್ರಶ್ನೆ


(ತುಷಾರದಲ್ಲಿ ಕವಿ ಕೆ ಎಸ್ ನ ಆಯ್ಕೆ ಕವನ)

ಗೆಳತಿ
ನಾ ಕಂಡಾಗಲೆಲ್ಲಾ
ನಿನ್ನ ಕಣ್ಣಲ್ಲಿ
ಒಂದು
ಮಲ್ಲಿಗೆಯ ಹೂವರಳಿ
ನಗುವುದೇಕೆ?

ನಿನ್ನ
ಸವಿಮಾತುಗಳು
ನನ್ನೆದೆಯ ಅಂಗಳದಿ
ಒಲವಿನ ರಂಗೋಲಿ
ಇಡುವುದೇಕೆ?

ನಿನ್ನ
ಕೈ ಬೆರಳುಗಳ
ನವಿರಾದ ಸ್ಪರ್ಷಕ್ಕೆ
ನನ್ನ ಮೈಮನಗಳಲ್ಲಿ
ಮಿಂಚಿನ ಬಳ್ಳಿಗಳು
ಹರಿವುದೇಕೆ?

ನಿನ್ನ
ಆ ಮುಂಗುರುಳು
ಮೆಲುಗಾಳಿಗಲುಗಿ
ಒಲವ ತೊಟ್ಟಿಲೊಳಿಟ್ಟು ನನ್ನ
ತೂಗುವುದೇಕೆ?

ನಿನ್ನ
ನಡೆ ಬಳುಕಿರಲು
ನನ್ನ ಮಾನಸ ವೀಣೆ
ಮಧುರ ಮೋಹನರಾಗವ
ನುಡಿಸುವುದು ಏಕೆ?

You may also like...

Leave a Reply