ದಿಟ್ಟತನ


ಎದೆಯಾಳದೊಳಗೆಲ್ಲೋ
ಕಟ್ಟಿ ಬಚ್ಚಿಟ್ಟಿರುವ
ಕನಸು ಬುತ್ತಿಯ ಬಗ್ಗೆ
ನಿನಗೆ
ತಿಳಿಯಿತಾದರು ಹೇಗೆ?

ಚೆಲುವಿನಾಸರೆಯೊಸೆದು
ಕಣ್ಣೊಳಗಿಂದ ಅಲ್ಲಿಳಿದು
ನೀನವನು ಹೆಕ್ಕಿ ಹೆಕ್ಕಿ
ಕತ್ತು ಹಿಸುಕುವುದನು
ಕಂಡ ಮೇಲೂ
ಮೂರ್ಖನಾಗಲಾದೀತೆ?

ಹೋಗೆ ಹೋಗೆ!

You may also like...

Leave a Reply