ಮಾತು-ಮೌನ


ನೆನಪಿಸಿಕೊ, ಆಗ
ಹೇಗೆ ಜೊತೆ-ಜೊತೆಗೆ

ಹೆಜ್ಜೆಯೊಳಗೆಜ್ಜೆಯಿಟ್ಟು
ಲಜ್ಜೆ ಎಂಬುದನ್ನು ಬದಿಗಿಟ್ಟು
ಬಾಂಬಣ್ಣ ಕರಗುವವರೆಗೂ
ಹರಟುತ್ತಿದ್ದದ್ದು ಅದೆಷ್ಟು?

ನರ ನರಗಳೂ ನಿಮಿರಿ,
ಅಂಗಾಂಗಗಳೆಲ್ಲವೂ ಅದುರಿ
ಹೊಟ್ಟೆ ಕಟ್ಟುವವರೆಗೂ
ಬಿಡದೆ ನಕ್ಕಿಬಿಟ್ಟಿದ್ದೆಷ್ಟು?

ಯಾರಿರಲಿ, ಬಿಡಲಿ
ಏನಂದರೂ ಅನ್ನಲಿ
ನಮಗೇನು? ಲೆಕ್ಕಿಸದೆ, ಇಬ್ಬರು-
ಒಬ್ಬರಾಗಿ ಅಲೆದದ್ದೆಷ್ಟು?

ಊಹಿಸಿಕೋ ಈಗ
ಕಾಯುತಿರುವೆವು ಹೇಗೆ?

ಮತ್ಸರವ ಮುಂದಿಟ್ಟು
ಬೆಳೆದ ಭಾವಗಳ ಬಲಿಗಿಟ್ಟು
ಕಾದು ಬೂದಿಯಾಗುವವರೆಗೂ
ಎದೆಯ ಕೆಂಡದೊಳಗಿಟ್ಟು

ಮಾತೆಲ್ಲಾ ಮೌನವಾಗಿ
ಮೌನವದು ನೀರಾಗಿ
ಕಣ್ಣೊಳಗೆ ಕರಗಿ ಜಾರಿದರೂ
ಅರಿಯದೆ ಪಣವ ತೊಟ್ಟು

ಬೆರೆಯಲಿಲ್ಲ ಮತ್ತೊಮ್ಮೆ
ಉಳಿಸಬಹುದಿತ್ತಲ್ಲವೆ? ಒಲುಮೆ
ಆದುದೆಲ್ಲವನು ಮರೆತು
ನಕ್ಕುಬಿಟ್ಟಿದ್ದರೆ ಹಠಬಿಟ್ಟು

You may also like...

Leave a Reply