ಮಿಲನಕಾಲ


ತಂದಾನೋ ತಂದಾನೋ ತಾನೋ
ತಂದಾನೋ ತಂದಾನೋ ತಾನೋ
ತಂದಾನೋ ತಂದಾನೋ ತಾನೀ ತಂದಾನೋ

ಮುಸ್ಸಂಜೆ ಹೊತ್ತಲ್ಲಿ ಮೋಡ
ಮುತ್ತಿನ ನೀರಲ್ಲಿ ಹಾಡ
ಹಾಡುತ್ತಾ ಭೂಮಿಗೆ ರಂಗು ತಂದಾವೋ…

ಎತ್ತಿಂದ ಬಂದಾವೋ ಹೀಗೆ
ಹುಟ್ಟುತ್ತಾ ಒಂದೊಂದೇ ಹಾಗೇ
ಒಟ್ಟಾಗಿ ಬಾನಲ್ಲಿ ತಾರೆ ನಕ್ಕಾವೋ…

ಹೊತ್ತಾರೆ ಸೂರ್ಯನ ಹಾಗೇ
ಕೆಂಪಾದ ಕೆನ್ನೆಯ ಮ್ಯಾಗೆ
ಚೆಂದಾದ ರಂಗೋಲಿಗಳು ಮೂಡ್ಯಾವೋ…

ಸಂಗಾತಿ ಬಾರೆಂದು ಕೂಗಿ
ಕಣ್ಣಲ್ಲಿ ಸಂಕೋಚ ತೂಗಿ
ಹೆಣ್ಣಿನ ಮನಸಲ್ಲಿ ಆಸೆ ಮೂಡ್ಯಾವೋ…

ಚಂದಿರ ಬಂದಾನೋ ಅಲ್ಲಿ
ಮಂದಾರ ನಕ್ಕಾಳೋ ಇಲ್ಲಿ
ಒಂದಾಗೋ ಸಂದೇಶ ಹೇಳಿಕೊಂಡಾವೋ…

ಬಾನಲ್ಲಿ ಹುಣ್ಣಿಮೆ ಚೆಲ್ಲಿ
ಬಯಲೆಲ್ಲಾ ಹೂಗಂಧ ಚೆಲ್ಲಿ
ಚೆಂದಾಗಿ ಪ್ರೀತಿಯಾ ಮಾಡಿಕೊಂಡಾವೋ…

You may also like...

Leave a Reply