ಅಸಹಾಯಕಿ ಮತ್ತು ಸ್ಮಶಾನ


ಅಸಹಾಯಕಿ

(ತುಷಾರ)

ಅವಳೆದುರೇ ಇದ್ದು
ಹಗಲುಗನಸು
ಕಾಣುವುದನು
ಖಂಡಿಸಿದಳು
ಅವಳಿಲ್ಲದಿರುಳುಗನಸು
ಕಾಣುವುದನು
ತುಂಡರಿಸಲಾರದ
ಹುಡುಗಿ.

 

ಸ್ಮಶಾನ

(ಕರ್ಮವೀರ)

ಅದೇನೋ ಹೂಗಾಡು
ಹಸುರಿದೆ,
ಹಾಸಿದ ಹುಲ್ಲಿದೆ
ಎಲ್ಲೆಲ್ಲೂ
ಆದರೇನು ಇದು
ಹೂಳ್ಗಾಡು
ಘನತೆಗಳಿಲ್ಲದ
ಸಮತೆಯೊಂದಿದೆ ಇಲ್ಲೂ.

You may also like...

Leave a Reply