ಕನ್ನಡ ಚಿತ್ರರಂಗದ ಕುತ್ತಿಗೆ ಹಿಸುಕುತ್ತಿರವ ಡಬ್ಬಿಂಗ್ ನಿಷೇಧವೆಂಬ ಭೂತ
ತೀರಾ ಇತ್ತೀಚೆಗೆ ಅಂದರೆ “ರಂಗೀತರಂಗ” ಹಾಗು “ಬಾಹುಬಲಿ” ಎಂಬ ಕನ್ನಡದ ಹಾಗು ಒಂದು ರೀತಿಯಲ್ಲಿ ಕನ್ನಡಿಗರನ್ನೊಳಗೊಂಡಿರುವ ತೆಲುಗಿನ ಚಿತ್ರಗಳು ಚಿತ್ರಮಂದಿರಕ್ಕಾಗಿ ನಡೆಸಿದ ಪೈಪೋಟಿಯನ್ನು ಕರ್ನಾಟಕದ ಜನ ವಿಶಾಲವಾದ ತೆರೆಯ ಮೇಲೆಯೇ ವೀಕ್ಷಿಸಿದ್ದಾಯಿತು. ಒಂದು ಅತೀ ದೊಡ್ಡ ಬಜೆಟ್ಟಿನ, ಅತೀ ದೊಡ್ಡ ಜನಗಳ ಬೆಂಬಲದಿಂದ ನಿರಾಯಾಸವಾಗಿ ಕನ್ನಡನಾಡಿನಲ್ಲಿ ಬಿಡುಗಡೆಯಾದ ತೆಲುಗಿನವರ ಚಿತ್ರ. ಇನ್ನೊಂದು ಹೊಸಬರ, ಹೊಸತನದ ಹಣೆಪಟ್ಟಿಯೊತ್ತು, ಪ್ರೇಕ್ಷಕನಲ್ಲಿ ಹೊಸ ಭರವಸೆ ಹುಟ್ಟಿಸಿಲೇಬೆಕೆಂಬ ಹಂಬಲ ಹೊತ್ತು ಕನ್ನಡಿಗರ ನಾಡಿನಲ್ಲಿ ನಿಲ್ಲಲು ಹೆಣಗಾಡಿದ...