Category: ಸಿನಿಹನಿ

ಕಚಗುಳಿ

ನೀ ಕಣ್ಣೆದುರು ಬಂದು ನಿಂತಾಗನಾನು ಮಾತಾನಾಡಲಾಗಲಿಲ್ಲಅಂದಮಾತ್ರಕ್ಕೆ ತಿಳಿಯದಿರುಏನೂ ಇದ್ದಿಲ್ಲವೆಂದು ನನ್ನ ಬಳಿ ದೂರೊಂದಿದೆ ಕೇಳು ನೀನುಪ್ರತಿ ಇರುಳೂ, ನನ್ನ ಎದೆಯೊಳಗೆತಡೆಯಲಾರೆ ಬೇಡ ಎಂದರೂನಿಲ್ಲಿಸುವುದಿಲ್ಲವೇಕೆ ಕಚಗುಳಿ?

ಅಸಹಾಯಕಿ ಮತ್ತು ಸ್ಮಶಾನ

ಅಸಹಾಯಕಿ (ತುಷಾರ) ಅವಳೆದುರೇ ಇದ್ದು ಹಗಲುಗನಸು ಕಾಣುವುದನು ಖಂಡಿಸಿದಳು ಅವಳಿಲ್ಲದಿರುಳುಗನಸು ಕಾಣುವುದನು ತುಂಡರಿಸಲಾರದ ಹುಡುಗಿ.   ಸ್ಮಶಾನ (ಕರ್ಮವೀರ) ಅದೇನೋ ಹೂಗಾಡು ಹಸುರಿದೆ, ಹಾಸಿದ ಹುಲ್ಲಿದೆ ಎಲ್ಲೆಲ್ಲೂ ಆದರೇನು ಇದು ಹೂಳ್ಗಾಡು ಘನತೆಗಳಿಲ್ಲದ ಸಮತೆಯೊಂದಿದೆ ಇಲ್ಲೂ.

ಭಯ ಮತ್ತು ಆಶ್ಚರ್ಯ

ಭಯ (ಪ್ರಕಟವಾದ ಪ್ರಪ್ರಥಮ ಕವನ) ಗೆಳತಿ ನಿನ್ನ ನೆನಸಿಕೊಳ್ಳದೆ ತಾಸು ಮಾಸವಾದೀತು ವರುಷಕೂಡ ಕಳೆಯಲು ನನಗೆ ತ್ರಾಸವಾದೀತು ಎಂಬ ಭಯ. ಆಶ್ಚರ್ಯ ಆಶ್ಚರ್ಯ! ಕಣ್ಣು-ಕಣ್ಣು ಸೇರುವ ಮೊದಲೇ ಹೃದಯ-ಹೃದಯ ಮಾತನಾಡಿಕೊಳ್ಳುವ ಬಗೆ ನನಗೆ.