Category: Kannada

ರಂಗರಾಯರೇ, ಅಗಣಿತ ರಾಗಮಣಿಗಳ ನಡುವೆ ನಿಮ್ಮನೇ ಮೆಚ್ಚಿದೆ ನಾನು

ಎಂ.ರಂಗರಾವ್ ಎಂದೊಡನೆ ತಕ್ಷಣ ನೆನಪಿಗೆ ಬರುವುದೇನೆಂದರೆ ಕನ್ನಡದ ಸುಶ್ರಾವ್ಯ ಚಲನ ಚಿತ್ರಗೀತೆಗಳ ಬಹು ದೊಡ್ಡ ಪಟ್ಟಿ. ಆಕಾಶವಾಣಿಯ “ಕೇಳುಗರ ಮೆಚ್ಚಿನ ಚಿತ್ರಗೀತೆ” ಕಾರ್ಯಕ್ರಮಗಳಲ್ಲಿ, ಕನ್ನಡದ ಯಾವ ಸಂಗೀತ ನಿರ್ದೇಶಕರ ಅತೀ ಹೆಚ್ಚು ಹಾಡುಗಳು ಇದುವರೆಗೂ ಪ್ರಸಾರವಾಗಿವೆ ಎಂದು ಪಟ್ಟಿ ಮಾಡಿದರೆ, ಬಹುಶಃ ಜಿ.ಕೆ.ವೆಂಕಟೇಶ್ ನಂತರ ಅವರ ಹತ್ತಿರತ್ತಿರ ನಿಲ್ಲಬಲ್ಲ ಮತ್ತೊಬ್ಬ “ಸಂಗೀತ ಕಲಾನಿಧಿ” ಶ್ರೀ ಎಂ.ರಂಗರಾವ್ ಅವರೊಬ್ಬರೇ. ವಿಜಯ ಭಾಸ್ಕರ್, ಟಿ.ಜಿ.ಲಿಂಗಪ್ಪ, ರಾಜನ್-ನಾಗೇಂದ್ರರಂಥಹ ದೈತ್ಯ ಸಂಗೀತ ಸಾರ್ವಭೌಮರ ನಡುವೆ ಇದ್ದೂ,...

ಬೊಗಳೆ ಕನ್ನಡೊದ್ಧಾರಕರಿಗೆ ಕಾರಂತರ ಮಾತಿನೇಟು

ಶಿವರಾಮ ಕಾರಂತರನ್ನೊಮ್ಮೆ ನೋಡುವ ಹಾಗೂ ಅವರ ಮಾತು ಕೇಳುವ ಸೌಭಾಗ್ಯ ನನಗೂ ಅಂದು ಸಿಕ್ಕಿತ್ತು. ಮಂಡ್ಯದಲ್ಲಿ “ವಿವೇಕಾನಂದ ಯುವ ವೇದಿಕೆ” ಯೊಂದರ ಉದ್ಘಾಟನಾ ನಿಮಿತ್ತ ಅವರು ಬಂದಿದ್ದರು. ಆ ಮಹಾನ್ ದೈತ್ಯ ಪ್ರತಿಭೆಯ ನಾಲ್ಕು ಮಾತುಗಳನ್ನು ಕೇಳಿ ಜೀವನ ಸಾರ್ಥಕ ಮಾಡಿಕೊಳ್ಳಲೋ ಎಂಬಂತೆ ಇಡೀ ನಗರದ ಜನ ಸಾಗರವೇ ಅಲ್ಲಿ ತುಂಬಿತ್ತು. ಕಾರ್ಯಕ್ರಮವೂ ಶುರುವಾಯಿತು. ನಾವೆಲ್ಲಾ ಕಾರಂತರನ್ನೇ ನೋಡುತ್ತಾ, ಮಾತು ಕೇಳುತ್ತಾ ಕುಳಿತಿದ್ದೆವು. ಅಲ್ಲಿಯ ಯವ ಮಂಡಳಿಯ ಮುಖ್ಯಸ್ಥನೊಬ್ಬ ಎದ್ದು...

ಭಕ್ತ ಕುಂಬಾರನನ್ನಾಗಿ ರಾಜಣ್ಣನನ್ನು ನೋಡುವುದತಿ ಚೆಂದ!

ಕನ್ನಡ ಚಿತ್ರಜಗತ್ತಿನ ಮರೆಯಲಾಗದ ಚಿತ್ರರತ್ನಗಳನ್ನು ಪಟ್ಟಿಮಾಡಬಹುದಾದರೆ, ಅದರಲ್ಲಿ ಅತಿ ಮುಖ್ಯವಾಗಿ “ಭಕ್ತ-ಕುಂಬಾರ”ವೂ ಒಂದು. “ಭಕ್ತ-ಕುಂಬಾರ” ಚಿತ್ರ ಹಲವಾರು ಕಾರಣಗಳಿಂದ ನನಗೆ ಇಷ್ಟವಾಗುತ್ತಾ ಹೋಗುತ್ತದೆ. ಪ್ರಮುಖವಾಗಿ ಚಿತ್ರದ ಕಥಾವಸ್ತು ಸಾಮಾನ್ಯನಿಗೂ ಅರ್ಥವಾಗುವ ರೀತಿಯಲ್ಲಿ ಸರಳಾತೀಸರಳವಾಗಿರುವುದು. ನಿರೂಪಣೆಯ ಶೈಲಿ ಮಗುವಿಗೂ ಅರ್ಥವಾಗುವಷ್ಟು ಸುಲಲಿತವಾಗಿರುವುದು. ಜೊತೆಗೆ “ಹುಣಸೂರು ಕೃಷ್ಣಮೂರ್ತಿ” ಯವರಂಥ ಪ್ರತಿಭಾವಂತರು ಈ ಅತ್ಯದ್ಭುತ ಚಿತ್ರವನ್ನು ನಿರ್ದೇಶನ ಮಾಡಿರುವುದು, ಇಂದಿಗೂ, ಮುಂದೆಯೂ, ಕನ್ನಡ ಚಿತ್ರರಂಗದ ಕೊನೆಯುಸಿರಿರುವವರೆಗೂ ಮರೆಯಾಗದಂಥಹ ಸಾಹಿತ್ಯ, ಸಂಗೀತದ ಜುಗಲ್‍ಬಂದಿಯನ್ನು ಈ ಚಿತ್ರಕ್ಕೆ...

ಹಳ್ಳಿ ಲೆಕ್ಕ

ನಾನು ನನ್ನ ತಾತ ಹಾಗೂ ತಂದೆಯವರಿಂದ ಕಲಿತ ಕೆಲವು ಹಳೆಕಾಲದ ಗಣಿತಗಳನ್ನು ಇಂದಿಲ್ಲಿ ಸಂಗ್ರಹಿಸಿ ನಮ್ಮ ಮುಂದಿನ ಪೀಳಿಗೆಯ ಜನಾಂಗಕ್ಕಾಗಿ ದಾಖಲಿಸಬೇಕೆಂದುಕೊಂಡಿದ್ದೆ. ಆ ಪ್ರಯತ್ನದ ಫಲವಾಗಿ ಕೆಲವು ಹಳ್ಳಿ ಲೆಕ್ಕಗಳನ್ನು ನಾನಿಲ್ಲಿ ಹೇಳಹೊರಟಿದ್ದೇನೆ. ಹಿಂದಿನ ದಿನಗಳಲ್ಲಿ ಇತ್ತೀಚಿನ “ಪೈಸೆ” ಮತ್ತು “ರೂಪಾಯಿ”ಗಳಿರುವಂತೆ, “ಕಾಸು”ಗಳು ಚಲಾವಣೆಯಲ್ಲಿದ್ದವು. ಒಂದು ರೀತಿಯಲ್ಲಿ ನೋಡಿದರೆ, ಹಿಂದಿನ ಎಲ್ಲಾ ಲೆಕ್ಕಗಳಲ್ಲೂ ಈ “ಕಾಸು” ಮೂಲಾಧಾರವಾಗಿರುವುದು ಕಂಡು ಬರುತ್ತದೆ. “ಕಾಸು”ಗಳಿಂದ “ರೂಪಾಯಿ”, “ರೂಪಾಯಿ”ಗಳಿಂದಲೇ ತೂಕಕ್ಕೆ ಸಂಬಂಧಪಟ್ಟ ಅಳತೆಗಳು ಹುಟ್ಟಿರುವುದನ್ನು...

ಕೆ ಎಸ್ ನ ಆಯ್ಕೆ ಸಿನಿಗವನ – ಪ್ರಶ್ನೆ

(ತುಷಾರದಲ್ಲಿ) ಗೆಳತಿ ನಾ ಕಂಡಾಗಲೆಲ್ಲಾ ನಿನ್ನ ಕಣ್ಣಲ್ಲಿ ಒಂದು ಮಲ್ಲಿಗೆಯ ಹೂವರಳಿ ನಗುವುದೇಕೆ? ನಿನ್ನ ಸವಿಮಾತುಗಳು ನನ್ನೆದೆಯ ಅಂಗಳದಿ ಒಲವಿನ ರಂಗೋಲಿ ಇಡುವುದೇಕೆ? ನಿನ್ನ ಕೈ ಬೆರಳುಗಳ ನವಿರಾದ ಸ್ಪರ್ಷಕ್ಕೆ ನನ್ನ ಮೈಮನಗಳಲ್ಲಿ ಮಿಂಚಿನ ಬಳ್ಳಿಗಳು ಹರಿವುದೇಕೆ? ನಿನ್ನ ಆ ಮುಂಗುರುಳು ಮೆಲುಗಾಳಿಗಲುಗಿ ಒಲವ ತೊಟ್ಟಿಲೊಳಿಟ್ಟು ನನ್ನ ತೂಗುವುದೇಕೆ? ನಿನ್ನ ನಡೆ ಬಳುಕಿರಲು ನನ್ನ ಮಾನಸ ವೀಣೆ ಮಧುರ ಮೋಹನರಾಗವ ನುಡಿಸುವುದು ಏಕೆ?

ಸಿನಿಕತೆ – ಅಭಾಗಿನಿ

ವಿಶಾಲವಾದ ಕಾರೀಡಾರಿನ ಗೋಡೆ ಮಗ್ಗುಲಿನಲ್ಲಿ ಸಾಲು ಬೆಂಚುಗಳನ್ನು ಒಪ್ಪವಾಗಿ ಜೋಡಿಸಲಾಗಿದ್ದ “ಜೀವಾ” ನರ್ಸಿಂಗ್ ಹೋಂ ಅಂದೂ ಕೂಡ ಯಾರೂ ಇಲ್ಲದೆ ಭಣಗುಡುತ್ತಿತ್ತು. ಸಂಜೆಯ ಸೆರಗಿನೊಳಗೆ ಬಹು ಬೇಗನೆ ಜಾರಿಕೊಳ್ಳುತ್ತಿದ್ದ ಇತ್ತೀಚಿನ ದಿನಗಳಲ್ಲಂತೂ ಗಿರಾಕಿಗಳಿಲ್ಲದೇ ಖಾಲಿಹೊಡೆಯುತ್ತಿದ್ದುದ್ದರಿಂದ ತನ್ನ ಪ್ರಸಿದ್ಧಿ, ಪ್ರಭಾವ, ಪಾಂಡಿತ್ಯಗಳೆಲ್ಲಾ ತೀರಾ ತಗ್ಗಿಹೋಗಿವೆಯೆಂದೂ, ಬಹುಕಾಲದಿಂದಲೂ ಜನಗಳನ್ನು ವಂಚಿಸುತ್ತಿದ್ದ ಹಿಕಮತ್ತು ವಗೈರೆಗಳೆಲ್ಲಾ ಉಡುಗಿಹೋಗುತ್ತಿವೆಯೆಂದೂ ಭಾವಿಸಿಕೊಂಡು ಭವಿಷ್ಯದ ತಾಕಲಾಟದಲ್ಲಿ ತಡವರಿಸುತ್ತಾ ಕುಳಿತಿದ್ದ ಗೈನಾಕಾಲಜಿಸ್ಟ್‌ಗೆ ಅಸಾಮಿಯೊಬ್ಬನ ಜೊತೆ ಒಳಬಂದ ನರ್ಸ್‍ಗಳಿಬ್ಬರನ್ನು ಕಂಡು ಆನಂದಾಶ್ಚರ್ಯಗಳೆರಡೂ ಒಟ್ಟಿಗೆ...

ಸಿನಿಗವನ – ವಿರಕ್ತ ಭಾವದಲಿ

ನಿಶ್ಯಬ್ಧದೆಡೆಗೆ ನಿರ್ದಿಷ್ಟ ಗುರಿಯಿಲ್ಲದೆ ನಿಂತು ಯೋಚಿಸಿದರೇನು ಬಂತು ಗುರಿಯಿಲ್ಲದ ಬಾಳು ದೊರೆಯಿಲ್ಲದ ನಾಡು ಎಂಬಂಥಹ ಈ ಸ್ಥಿತಿಯಲ್ಲಿ ನಗಬಾರದೆಂದೆನಿಸಿದರೂ ನಗುತಾನಂದದಲಿ ಅಳಬೇಕೆನಿಸಿದರೂ ಅಳಲಾಗದ ನೋವಿನಲಿ ಎಷ್ಟು ದಿನ ಹೀಗೇ ಕಾಲ ಕಳೆಯಲಿ? ಕಣ್ಣು ಮುಚ್ಚಿ ಕ್ಷಣವೊಮ್ಮೆ ನಿಶ್ಚಿಂತೆಯಲಿ ಎಲ್ಲವನ್ನೂ ಮರೆತು, ಎಲ್ಲರನ್ನೂ ತೊರೆದು, ಎಲ್ಲರಿದ್ದರೂ ಯಾರಿರದೇ, ಎಲ್ಲೆ ಮೀರಲೂ ಕೈಲಾಗದೇ ಎಲ್ಲೋ ಮುಖಮಾಡಿ ನಿಂತ ನನ್ನ ದಯನೀಯ ಗತಿ ಕಂಡು ಕೇಳದಿದ್ದವರೆಲ್ಲಾ ಕೇಳುವ ಹೇಳಲಾಗದಿದ್ದವರೆಲ್ಲಾ ಬುದ್ಧಿ ಹೇಳುವ ಆ ದಿನ...

ಹಂಸಲೇಖಾರ ದೇಸಿಲೋಕದೊಳಗೊಂದು ಸುತ್ತು

ಕನ್ನಡ ಚಿತ್ರಜಗತ್ತಿನ ಪುಟಗಳಲ್ಲಿ ಬಹು ಮುಖ್ಯವಾಗಿ ಕಾಣಬಹುದಾದ ಕೆಲವೇ ಕೆಲವು ವ್ಯಕ್ತಿಗಳ ಸಾಲಿನಲ್ಲಿ ಹಂಸಲೇಖಾರ ಹೆಸರೂ ಒಂದು. ಹಂಸಲೇಖಾರ ಹೆಸರು ಹಲವಾರು ಕಾರಣಗಳಿಂದಾಗಿ ಪ್ರಸಿದ್ಧಿ. ಬಾಲು, ಮಾಲು ಎಂದು ಹಾಡು ಬರೆದು ಹರೆಯದ ಹುಡುಗ-ಹುಡುಗಿಯರ ಯೌವ್ವನದ ಕಿಚ್ಚಿನ ಬುಡಕ್ಕೇ ಬೆಂಕಿ ಹಚ್ಚಿದ್ದಕ್ಕಾಗಿ, ಆ ವರ್ಗದ ಒಂದು ಗುಂಪಿಗೆ ಅವರು ಪ್ರೀತಿ. ನಂತರದ ದಿನಗಳಲ್ಲಿ ರವಿಚಂದ್ರನ್-ಹಂಸಲೇಖಾ ಅವರ ಜೊಡಿಯಲ್ಲಿ ಬಂದ ಅನೇಕ ಚಿತ್ರಗಳಲ್ಲಿನ ಅವರ ಸೊಗಸಾದ ಸಾಹಿತ್ಯ, ಸಂಗೀತ ಹಾಗೂ ಸಂಭಾಷಣೆಗಳಿಂದ...

“ಬಂಗಾರ”ದ ಮನುಷ್ಯರಿಲ್ಲದೆ ಬರಿದಾದ ಕನ್ನಡ ಚಿತ್ರರಂಗ

“ಬಂಗಾರದ ಮನುಷ್ಯ”ನ ಕಾಲಾನಂತರ ಕನ್ನಡ ಚಿತ್ರರಂಗವೇಕೆ ತುಕ್ಕು ಹಿಡಿದ ಕಬ್ಬಿಣವಾಗಗಿಹೋಯಿತು? ಕಲಾತ್ಮಕ ಚಿತ್ರಗಳು ಹಿಂದಿನಷ್ಟು ಸಂಖ್ಯೆಯಲ್ಲಿ ಬರದಿದ್ದರೂ, ಬಂದಷ್ಟೂ ಒಂದಷ್ಟು ಹೆಸರುಮಾಡಿ ನಮ್ಮ ಮರ್ಯಾದೆ ಸಂಪೂರ್ಣವಾಗಿ ಹೋಗದಂತೆ ನೋಡಿಕೊಳ್ಳುತ್ತಿವ್ಯಾದರೂ ಬೇರೆ ಭಾಷೆಗಳ ಪ್ರಗತಿಯನ್ನು ಗಮನಿಸಿದಾಗ ನಮ್ಮ ಸಾಧವೆ ಏನೇನೂ ಸಾಲದೇನೋ ಅನ್ನಿಸುತ್ತದೆ. ಈ ಗುಂಪಿನ ಚಿತ್ರಗಳನ್ನು ಹೊರತುಪಡಿಸಿ ಕನ್ನಡ ಚಿತ್ರರಂಗದತ್ತ ಒಮ್ಮೆ ನೋಡಿದರೆ “ಥತ್! ಎಲ್ಲಿ ಹೋದವಾ ದಿನಗಳು?” ಎಂದೆನಿಸಿ ಬೇಸರವಾಗುತ್ತದೆ. ಮನೆಮಂದಿಯೆಲ್ಲಾ ಕೂತು ನೋಡುವಂಥ ಚಿತ್ರಗಳಂತೂ ಇಲ್ಲ. ಮನರಂಜನೆಯಂತೂ...

ಮತ್ತೇ ಬರಲಾರಿರಾ ಅಶ್ವಥ್, ಅನಂತಸ್ವಾಮಿ, ಕಾಳಿಂಗರಾಯರೇ?

“ಅಯ್ಯೋ ವಿಧಿಯೇ! ಎಂಥಹ ಧ್ವನಿ ನಿಂತು ಹೋಯಿತು”. ಇದು ನನ್ನೊಬ್ಬನದಲ್ಲ. ಇಡೀ ಕನ್ನಡಿಗರೆದೆಯಾಳದಿಂದೊಟ್ಟಿಗೆ ಹೊರಬಂದ ನೋವಿನ ಮಾತುಗಳು. ಕನ್ನಡ ಸುಗಮ ಸಂಗೀತಲೋಕವನ್ನಾಳಿದ ದೊರೆ ಸಿ.ಅಶ್ವಥ್ ಅವರ ನಿರ್ಗಮದಿಂದ, “ಇನ್ನೆಲ್ಲಿ? ಮತ್ತೆ ಕನ್ನಡದಲ್ಲಿ, ಆ ವೈಭವದ ದಿನಗಳು” ಎಂದು ಕನ್ನಡ ಕಾವ್ಯ ಜಗತ್ತಿನ ಕುಲಬಾಂಧವರೆಲ್ಲಾ ಗೋಳಿಟ್ಟ ದುರ್ದಿನಳವು. ಸುಗಮ ಸಂಗೀತ ಪಿತಾಮಹ ಕಾಳಿಂಗರಾಯರ ಕಾಲಾನಂತರ ಕನ್ನಡದಲ್ಲಿ ಮತ್ತೆ ಕನ್ನಡ ಕಾವ್ಯಗಳನ್ನು “ಜನಮನಗಳಿಗೆ ತಲುಪಿಸಲಾಗುವುದಿಲ್ಲವಲ್ಲಾ?” ಎಂದು ಎಲ್ಲಾ ಕೈಚೆಲ್ಲಿ ಕುಂತಿದ್ದ ಕಾಲವದು. ಕಾಳಿಂಗರಾಯರಷ್ಟೇ...