ಒಂಟಿತನ


ಬಾನ ಬಯಲಾಗಿದೆ
ಬತ್ತಲೆ, ಬರೀ ಕತ್ತಲೆ
ಮುನಿಸಿನಿಂದಿದೆ ನಭ
ಭೂದೇವಿಯ ಮೇಲೆ

ಚಂದಿರನ ಸುಳಿವಿಲ್ಲ
ಬೆಳಕನ್ನು ತರಲಿಲ್ಲ
ತಾರೆಗಳೂ ತಾವೇಕೊ
ಇಂದವನ ಬಳಸಿಲ್ಲ

ಗಾಳಿಗೂ ಕಚಗುಳಿಯ
ಮೂಡಿಸುವ ಮನಸಿಲ್ಲ
ಮೋಡಕೂ ಅದರೊಡನೆ
ತಾನಾಡುವ ಒಲವಿಲ್ಲ

ಹೂವಾದರೂ ಉಸಿರಾಡಿ
ಗಂಧವನು ಬಿಡುತ್ತಿಲ್ಲ
ಮಳೆಯಾಗಿದೆ, ಮರದಿಂದ
ಜೀರುಂಢೆಯ ದನಿಯಿಲ್ಲ

ವಿಧಿಯೊಡನೆ ಕಾದಾಡಿ
ಬರಿಗೈಯ್ಯೇ ನಿನಗಿಂದು
ದಾರಿ ನೋಡೆನು ಫಲ?
ಪ್ರಿಯತಮನ ಬರುವಿಲ್ಲ

You may also like...

Leave a Reply