ಕಳ್ಳತನ


ಹುಡುಗಿ
ನಿನ್ನ ನೋಡಲು ಬಂದ
ನನ್ನ
ಪರದೆಯ ಮರೆಯಿಂದ
ಕದ್ದು ನೋಡಿದೆ
ನನ್ನೆದುರೇ
ಕಳ್ಳತನ ಮಾಡಿದೆ

ಹೊರಟು ನಿಂತಾಗ
ಬಾಗಿಲ ಬಳಿ ಬಂದೆ
“ಮತ್ತೆ ಬರುವಿರಾ?”
ಎಂದೇನೋ ಕೇಳಬೇಕೆಂದು
ಹೇಗೇ? ಅಂದುಕೊಂಡೆ
ನಾನದನ್ನು ಗಮನಿಸಿದೆ

ಮುಂದೆ ನಾ
“ರಿಕ್ಷಾ ಎಲ್ಲಿ ಸಿಗುತ್ತದೆ?”
ಎಂದು ತಂಗಿಯನ್ನು ಕೇಳಿದ್ದೇ ತಡ
ತಕ್ಷಣ ನೀನು ಉತ್ತರಿಸಿದೆಯಲ್ಲಾ
“ಅಲ್ಲೇ ಮುಂದೆ”

ನಾಚಿಕೆ ಇಲ್ಲದೆ.

You may also like...

Leave a Reply